ದೇಶ

ಮುಂಬೈನಲ್ಲಿ ಅನಿಲ ಸೋರಿಕೆಯ ವಾಸನೆ: ಜನರಲ್ಲಿ ಆತಂಕ

ಮುಂಬೈ,ಸೆ.20- ಮುಂಬೈಯಾದ್ಯಂತ ಅನಿಲ ಸೋರಿಕೆಯಂತಹ ವಾಸನೆಯಿಂದ ಜನತೆ ಆತಂಕಕ್ಕೀಡಾದ ಘಟನೆ ನಡೆದಿದೆ.

ಪೊವಾಯಿಯಿಂದ ಮೀರಾರೋಡ್ ತನಕ ಪಶ್ಚಿಮ ಹಾಗೂ ಪೂರ್ವ ಉಪನಗರಗಳಲ್ಲಿ ಅನಿಲ ಸೋರಿಕೆಯಂತಹ ವಾಸನೆ ಬಂದಿದೆ. 30ರಿಂದ 40 ನಿಮಿಷಗಳ ಬಳಿಕ ವಾಸನೆ ಕಡಿಮೆಯಾಗಲಾರಂಭಿಸಿದ್ದು, ಜನರು ನಿಟ್ಟುಸಿರುಬಿಟ್ಟಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಅನಿಲ ಸೋರಿಕೆಯ ಸುದ್ದಿ ವ್ಯಾಪಿಸಿದ್ದು, ತಕ್ಷಣವೇ ಎಚ್ಚೆತ್ತುಕೊಂಡ ಮುಂಬೈ ಮಹಾನಗರ ಪಾಲಿಕೆಯ ವಿಪತ್ತು ಘಟಕ, ಅನಿಲ ಸೋರಿಕೆಯ ಮೂಲವನ್ನು ಪತ್ತೆ ಹಚ್ಚಲು ಆರಂಭಿಸಿತು.

ರಾಷ್ಟ್ರೀಯ ರಾಸಾಯನಿಕ ರಸಗೊಬ್ಬರ ಘಟಕದಲ್ಲಿ ಗ್ಯಾಸ್ ಲೀಕ್ ಆಗಿದೆ ಎಂಬ ವದಂತಿ ಹಬ್ಬಿತ್ತು. ಟ್ರಾಂಬೆ ಪೊಲೀಸರು ಅಲ್ಲಿಗೆ ತೆರಳಿ ಪರಿಶೀಲಿಸಿದಾಗ, ಆರ್ಸಿಎಫ್ನಲ್ಲಿ ಯಾವುದೇ ಸೋರಿಕೆಯ ಮಾಹಿತಿ ಲಭಿಸಿರಲಿಲ್ಲ. ಮಹಾನಗರ ಗ್ಯಾಸ್ ಲಿಮಿಟೆಡ್ ಕೂಡ ತನ್ನ ಯಾವುದೆ ಪೈಪ್ಗಳಲ್ಲಿ ಸೋರಿಕೆಯಾಗಿಲ್ಲ ಎಂದು ಹೇಳಿಕೆಯೊಂದರಲ್ಲಿ ಸ್ಪಷ್ಟಪಡಿಸಿದೆ.

ಮುಂಬೈ ಪೊಲೀಸರು ಪೊವಾಯ್, ಚೆಂಬೂರ್, ಚಕಾಲ, ಗೋರೆಗಾಂವ್ನಿಂದ ಮೀರಾರೋಡ್ ತನಕ ದೂರುಗಳನ್ನು ಸ್ವೀಕರಿಸಿದ್ದರು. (ಎಂ.ಎನ್)

Leave a Reply

comments

Related Articles

error: