
ಮೈಸೂರು
ಸಿದ್ದರಾಮಯ್ಯನವರನ್ನು ಸೋಲಿಸಿ ಬಿಟ್ಟರು ಎಂದು ಜಿ.ಟಿ ದೇವೇಗೌಡ ಅವರನ್ನು ಮುಖ್ಯಮಂತ್ರಿ ಮಾಡಬೇಕಿತ್ತಾ : ಮಾಜಿ ಸಚಿವ ಜಿ.ಟಿ.ದೇವೇಗೌಡ ವಿರುದ್ಧ ಮಾಜಿ ಸಿಎಂ ಕುಮಾರಸ್ವಾಮಿ ವಾಗ್ದಾಳಿ
ಮೈಸೂರು,ಸೆ.21:- ಸಿದ್ದರಾಮಯ್ಯ ಅವರನ್ನು ಸೋಲಿಸಿ ಬಿಟ್ಟರು ಎಂದು ಜಿ.ಟಿ ದೇವೇಗೌಡ ಅವರನ್ನು ಮುಖ್ಯಮಂತ್ರಿ ಮಾಡಬೇಕಿತ್ತಾ ಎಂದು ಕೇಳುವ ಮೂಲಕ ಮಾಜಿ ಸಚಿವ ಜಿ.ಟಿ.ದೇವೇಗೌಡರ ವಿರುದ್ಧವೇ ಮಾಜಿ ಸಿಎಂ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ನಿನ್ನೆ ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ನಾನು ಮೈಸೂರನ್ನೇ ನೋಡಿರಲಿಲ್ಲ, ನನಗೆ ಮೈಸೂರು ತೋರಿಸಿದ್ದೇ ಜಿ.ಟಿ ದೇವೇಗೌಡ ಅವರಲ್ಲವೇ, ಅವರು ದೊಡ್ಡ ನಾಯಕರು ಅವರ ಬಗ್ಗೆ ನಾನು ಮಾತನಾಡಲ್ಲ, ನಮಗೆಲ್ಲ ಮೈಸೂರು ತೋರಿಸಿದ್ದು ಅವರೇ ಅಲ್ಲವೇ, ಅದಕ್ಕೂ ಮುಂಚೆ ನಾನು ಮೈಸೂರನ್ನೇ ನೋಡಿರಲಿಲ್ಲ ಎಂದು ವ್ಯಂಗ್ಯವಾಡಿದರು.
ಮೈಸೂರಿನಲ್ಲಿ ಗ್ರಾಮಾಂತರ ಮುಖಂಡರ ಸಭೆ ಕರೆದಿದ್ದೇವೆ. ಸಭೆಗೆ ನಮ್ಮ ಅಧ್ಯಕ್ಷರು ಜಿಟಿಡಿಯವರನ್ನು ಆಹ್ವಾನಿಸಿದ್ದಾರೆ. ಪಾಪ ಅವರೇ ಹೇಳಿದಂತೆ ಅವರಿಗೆ ಈಗ ವಿಶ್ರಾಂತಿ ಬೇಕಂತೆ. ಅವರು ವಿಶ್ರಾಂತಿ ತೆಗೆದುಕೊಳ್ಳಲಿ ಬಿಡಿ. ನಾವ್ಯಾಕೆ ಅವರಿಗೆ ತೊಂದರೇ ಕೊಡೋಣ. ಸಭೆಗೆ ಬರೋದು ಬಿಡೋದು ಅವರಿಗೆ ಬಿಟ್ಟದ್ದು. ಅವರು ಈಗ ಬೆಳೆದಿದ್ದಾರೆ ಅವರ ಬಗ್ಗೆ ನಾನು ಮಾತನಾಡಲ್ಲ ಎಂದರು.
ಜೆಡಿಎಸ್ ಪಕ್ಷ ಕಟ್ಟೋಕೆ ಸಿದ್ದರಾಮಯ್ಯ ಬಿಡಿಗಾಸು ಕೊಟ್ಟಿಲ್ಲ, ಸಾಲವೋ ಸೋಲವೋ ಪಕ್ಷ ಉಳಿಸಿದ್ದು ದೇವೇಗೌಡರ ಕುಟುಂಬ. ಕಾರ್ಯಕರ್ತರಿಗೆ ಏನಾದರೂ ನೋಡೋದು ಸಹ ದೇವೇಗೌಡರ ಕುಟುಂಬವೇ. ಯಾರು ಒಂದು ಬಿಡಿಗಾಸು ಜೆಡಿಎಸ್ ಪಕ್ಷ ಸಂಘಟನೆ ಕೊಟ್ಟಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. (ಕೆ.ಎಸ್,ಎಸ್.ಎಚ್)