ಮೈಸೂರು

‘ಡಾ.ಶಾಂತಾ ಇಮ್ರಾಪುರ’ : ಶಕುಂತಲ ಜಯದೇವ ಶರಣ ಪ್ರಶಸ್ತಿ ಪ್ರದಾನ ಸಮಾರಂಭ ‘ಫೆ.26ಕ್ಕೆ’

ಶಕುಂತಲ ಜಯದೇವ ಶರಣ ಪ್ರಶಸ್ತಿ ಪ್ರದಾನ, ಸದಸ್ಯತ್ವ ಹಾಗೂ ಪರಿಷತ್ತಿನ ಮಹಾಮಾರ್ಗ ಮತ್ತು ಮುಂದಣ ಹೆಜ್ಜೆ  ಕಾರ್ಯಕ್ರಮವನ್ನು ಇದೇ ದಿ. 26ರಂದು ಹಮ್ಮಿಕೊಳ್ಳಲಾಗಿದೆ ಎಂದು ಶರಣ ಸಾಹಿತ್ಯ ಪರಿಷತ್ತಿನ ನಗರ ಘಟಕದ ಅಧ್ಯಕ್ಷ ಗೊ.ರು.ಪರಮೇಶ್ವರಪ್ಪ ತಿಳಿಸಿದರು.

ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಜೆ.ಎಸ್.ಎಸ್.ಆಸ್ಪತ್ರೆಯ ಆವರಣದಲ್ಲಿರುವ ಶ್ರೀರಾಜೇಂದ್ರ ಭವನದಲ್ಲಿ ಸಂಜೆ 5.30ಕ್ಕೆ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ಶರಣ ಸಾಹಿತ್ಯ ಪರಿಷತ್ತು ಜಿಲ್ಲಾ ಹಾಗೂ ನಗರ ಘಟಕದ ಸಹಯೋಗದೊಂದಿಗೆ ನಡೆಯುವ ಕಾರ್ಯಕ್ರಮದಲ್ಲಿ ಸುತ್ತೂರು ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಸಾನಿಧ್ಯ ವಹಿಸುವರು ಎಂದರು.

ಪ್ರಸಕ್ತ ಸಾಲಿನ ಶಕುಂತಲ ಜಯದೇವ ಶರಣ ಪ್ರಶಸ್ತಿಗೆ ಧಾರವಾಡದ ಕರ್ನಾಟಕ ವಿವಿಯ ನಿವೃತ್ತ ಪ್ರಾಧ್ಯಾಪಕ ಡಾ.ಶಾಂತಾ ಇಮ್ರಾಪೂರ ಅವರು ಭಾಜನರಾಗಿದ್ದು ಪ್ರಶಸ್ತಿಯು 25 ಸಾವಿರ ರೂಪಾಯಿ ನಗದು, ಪ್ರಶಸ್ತಿ ಪತ್ರವನ್ನೊಳಗೊಂಡಿದೆ. ಹಿರಿಯ ಸಾಹಿತಿ ಡಾ.ಎಸ್.ಎಮ್.ವೃಷಬೇಂದ್ರ ಸ್ವಾಮಿಯವರ ತೆರವಾದ ಪರಿಷತ್ತಿನ ಸ್ಥಾನವನ್ನು ಮಾಜಿ ಶಾಸಕ ಹೆಚ್.ಗಂಗಾಧರನ್ ಅವರಿಗೆ ನೀಡಲಾಗುತ್ತಿದೆ. ಈ ಸಂದರ್ಭದಲ್ಲಿ ಪ್ರತಿಭಾ ಪುರಸ್ಕಾರವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಮಾಜಿ ಶಾಸಕ ತೋಂಟದಾರ್ಯ ಅಧ್ಯಕ್ಷತೆಯಲ್ಲಿ ನಡೆಯುವ  ಮಹಾಮಾರ್ಗ ಮತ್ತು ಮುಂದಿನ ಹೆಜ್ಜೆಯಲ್ಲಿ ಡಾ.ಗೊ.ರು.ಚನ್ನಬಸಪ್ಪ, ಡಾ.ಬಸವರಾಜ ಸಾದರ ಹಾಗೂ ಪ್ರೊ.ಮಲೆಯೂರು ಗುರುಸ್ವಾಮಿ ಭಾಗವಹಿಸುವರು.

ಶರಣ ಸಾಹಿತ್ಯ  ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷ ಜಗದೀಶ್ ಶೆಟ್ಟರು, ಕಾರ್ಯದರ್ಶಿ ಮಹಾದೇವಪ್ಪ, ಉಪಾಧ್ಯಕ್ಷ ಸದಾನಂದೇ ಗೌಡ, ಪದಾಧಿಕಾರಿ ಗಿರೀಶ್ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

Leave a Reply

comments

Related Articles

error: