ಮೈಸೂರು

ಬಿಎಸ್ ಎನ್ ಎಲ್ ಕೇಂದ್ರೀಯ ಕಾರ್ಯನಿರ್ವಾಹಕ ಮಂಡಳಿ ಸಭೆ : ಹಲವು ವಿಷಯಗಳ ಚರ್ಚೆ

ಅಖಿಲ ಭಾರತ  ಬಿಎಸ್‍ಎನ್‍ಎಲ್ –ಡಿಒಟಿ  ಪಿಂಚಣಿದಾರರ ಸಂಘದ ವತಿಯಿಂದ ಕೇಂದ್ರೀಯ ಕಾರ್ಯನಿರ್ವಾಹಕ ಮಂಡಳಿಯ ಸಭೆ ಜರುಗಿತು.

ಮೈಸೂರಿನ ಟಿ.ಕೆ.ಲೇಔಟ್ ನಲ್ಲಿರುವ ಪ್ರಾದೇಶಿಕ ದೂರಸಂಪರ್ಕ ತರಬೇತಿ ಕೇಂದ್ರದಲ್ಲಿ ನಡೆದ ಸಭೆಯಲ್ಲಿ ನಿವೃತ್ತ  ಕಾರ್ಮಿಕರ ಸಂಘದ ಲಾಂಛನ ಹಾಗೂ ನಮ್ಮ ಭಾರತದ ತ್ರಿವರ್ಣ ಧ್ವಜವನ್ನು ಹಾರಿಸುವ ಮೂಲಕ ಎರಡು ದಿನಗಳ ಕಾರ್ಯಕ್ರಮಕ್ಕೆ  ಚಾಲನೆ ನೀಡಲಾಯಿತು.  ಸಭೆಯಲ್ಲಿ  ಕೇಂದ್ರ ಸರ್ಕಾರ 7ನೇ ವೇತನ ಆಯೋಗಕ್ಕೆ ಅನ್ವಯಿಸುವಂತೆ 1-1-2017ರ ವರೆಗೆ ಅನ್ವಯಿಸುವಂತೆ ನಿವೃತ್ತಿ ವೇತನ ನೀಡುವಿಕೆ. ಆರೋಗ್ಯ ರಕ್ಷಣೆಯ ವೇತನ ನೀಡುವಿಕೆ ಸೇರಿದಂತೆ 10 ವರ್ಷ ಸೇವೆ ಸಲ್ಲಿಸಿದವರಿಗೆ ನಿವೃತ್ತಿ ವೇತನ  ನೀಡುವಿಕೆಯ ಕುರಿತು  ತಿಳಿಸಲಾಯಿತು. ಮಾತ್ರವಲ್ಲ ಸತತ ಏಳು ವರ್ಷದಿಂದ ಬಿಎಸ್‍ಎನ್‍ಎಲ್ ನಷ್ಟ  ಅನುಭವಿಸುತ್ತ  ಬರುತ್ತಿದೆ. ಆದರೆ 2015-16ರ ಸಾಲಿನಲ್ಲಿ   ಬಿಎಸ್‍ಎನ್‍ಎಲ್ ಕಾರ್ಮಿಕ ಸಂಘಟನೆ ಪ್ರಾಮಾಣಿಕತೆ ಹಾಗೂ ಪರಿಶ್ರಮದಿಂದ 3855 ಕೋಟಿ ಹಣವನ್ನು ಲಾಭಗಳಿಸಿದೆ. ಖಾಸಗಿ ಸಂಸ್ಥೆ  ಜಿಯೋ ನಡುವೆಯೂ  ಕೂಡ ನಾವು ಲಾಭ ಗಳಿಸಿದ್ದೇವೆ. ಇದರಿಂದ ನಮಗೆ ಸವಲತ್ತುಗಳನ್ನ ನೀಡಬೇಕೆಂದು ಸಂಘಟನೆಯವರು ಕೇಂದ್ರಕ್ಕೆ ಸಭೆಯ ಮೂಲಕ ಮನವಿ ಮಾಡಿದರು.  ಇದೇವೇಳೆ ಕಾರ್ಯಕ್ರಮದಲ್ಲಿ ಎನ್.ಸಿ.ಸಿ.ಪಿ.ಎ ದೆಹಲಿ ಕಾರ್ಯದರ್ಶಿ ಕೆ.ಕೆ.ಎನ್. ಕುಟ್ಟಿ ಈ ಎರಡು ದಿನಗಳ ಸಭೆಯ ಕಾರ್ಯಕ್ರಮವನ್ನ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು. ಜೊತೆಯಲ್ಲಿ ವಿಜಯಕುಮಾರ್, ಜಯರಾಜ್, ವಿಜಯ್ ಕುಮಾರ್, ಮೋಹನ್ ಕುಮಾರ್, ಅಣ್ಣಿಗೇರಿ, ಬಸವರಾಜು ಸೇರಿದಂತೆ ಹಲವರು ಉಪಸ್ಥಿತರಿದ್ದರು.

Leave a Reply

comments

Related Articles

error: