ಪ್ರಮುಖ ಸುದ್ದಿಮೈಸೂರು

ಮಾಜಿ ಸಚಿವ ಸಾ.ರಾ. ಮಹೇಶ್ ಗೆ ಏಕವಚನದಲ್ಲಿ ಟೀಕಾ ಪ್ರಹಾರ ನಡೆಸಿದ ಮಾಜಿ ಸಚಿವ ಹೆಚ್.ವಿಶ್ವನಾಥ್

ಮೈಸೂರು,ಸೆ.22:-  ಚುನಾವಣೆ ಘೋಷಣೆಗೂ ಮುನ್ನವೇ ನಾವು ಸುಪ್ರೀಂ ಕೋರ್ಟ್’ಗೆ ಹೋಗಿದ್ದೇವೆ. ಹೀಗಾಗಿ ಚುನಾವಣೆಗೆ ತಡೆ ಆದೇಶ ಸಿಗಲಿದೆ ಎಂದು ಮಾಜಿ ಸಚಿವ, ಅನರ್ಹ ಶಾಸಕ ಎಚ್.ವಿಶ್ವನಾಥ್ ಹೇಳಿದರು.

ಮೈಸೂರಿನಲ್ಲಿಂದು ಮಾತನಾಡಿದ ಅವರು ರಾಜ್ಯದಲ್ಲಿ ರಾಕ್ಷಸ ರಾಜಕಾರಣ ನಡೆಯುತ್ತಿದೆ. ಯಾರು ದುಡ್ಡಿಗಾಗಿ ರಾಜೀನಾಮೆ ನೀಡಿಲ್ಲ. ಥರ್ಡ್ ಗ್ರೇಡ್ ಜನ ನಾನು ಮಾರಾಟ ಆದೆ ಅಂತಾ ಆರೋಪ ಮಾಡಿದ್ದಾರೆ. ಎಂಟಿಬಿ ನಾಗರಾಜ್ 10 ಕೋಟಿ ರೂ. ಕಾರಲ್ಲಿ ಓಡಾಡ್ತಾರೆ. ಅವರು ಮಾರಾಟ ಆಗಿದ್ದಾನಾ ? ಯಾರು ಈ ರೀತಿಯ ಆರೋಪ ಮಾಡಬೇಡಿ ಎಂದು  ಹೇಳಿದರು.

ನಮ್ಮ ಅನರ್ಹ ಶಾಸಕರ ವಿಚಾರ ಸುಪ್ರೀಂಕೋರ್ಟ್ ಮುಂದಿದೆ. ಇದರ‌ ನಡುವೆ ಚುನಾವಣಾ ಆಯೋಗ ಚುನಾವಣೆಗೆ ದಿನಾಂಕ‌ ನಿಗದಿ ಮಾಡಿದೆ. ಸ್ಪೀಕರ್ ಆದೇಶ ಹಾಗೂ ಅವರ ನಡವಳಿಕೆಯನ್ನು ಸುಪ್ರೀಂಕೋರ್ಟ್ ಗಮನಿಸಿದೆ. ಸುಪ್ರೀಂಕೋರ್ಟ್ ನಲ್ಲಿ ನಾಳೆ ಪ್ರಕರಣದ ವಿಚಾರಣೆ ಇದೆ. ನಮಗೆ ನ್ಯಾಯ ಸಿಗುವ ವಿಶ್ವಾಸವಿದೆ ಎಂದು ಹೇಳಿದರು.

ಮಾಧ್ಯಮಗಳು ಅನರ್ಹ ಶಾಸಕರು ಅಂತಾ ಬಳಸದಿರಿ. ಯಾವ ಶಾಸಕರು ದುಡ್ಡಿಗೆ ಮಾರಿಕೊಂಡವರಲ್ಲ. ಅಧಿಕಾರಕ್ಕಾಗಿ ಪದವಿಗಾಗಿ ಅಲ್ಲ ಪದ ತ್ಯಾಗ ಮಾಡಲ್ಲ. ರಾಜ್ಯದಲ್ಲಿದ್ದ ರಾಕ್ಷಸ ರಾಜಕಾರಣ, ಕ್ರಿಯಾಶೀಲತೆಯ ಪತನದಿಂದ ತೆಗೆದುಕೊಂಡ ನಿರ್ಧಾರ. ಎಂಟಿಬಿ ನಾಗರಾಜ್ 12 ಕೋಟಿ ಕಾರಿನಲ್ಲಿ ತಿರುಗುವರು. ಕಳೆದ ಚುನಾವಣೆಯಲ್ಲಿ ಸಿದ್ದರಾಮಯ್ಯ ಗೆ 80 ಕೋಟಿ ಹಣ ಕೊಟ್ಟಿದ್ರು. ಮತ್ತೆ ಸಿಎಂ ಆಗಬೇಕೆಂಬ ಉದ್ದೇಶದಿಂದ ಹಣ ಸಂಗ್ರಹಿಸಿ ಕೊಟ್ಟಿದ್ರು. ಅಂತಹವರು ಹಣಕ್ಕೆ ಮಾರಿಕೊಂಡಿದ್ದಾರೆ ಅಂತ ಸಿದ್ದರಾಮಯ್ಯ ಹೇಳೋದು ಸರಿಯಲ್ಲ. ನಮಗೆ ಈಗಲೂ ಕುಮಾರಸ್ವಾಮಿ ನಾಯಕರು. ಅವರ ಬಗ್ಗೆ ಈಗಲೂ ಗೌರವವಿದೆ. ಕುಮಾರಸ್ವಾಮಿ ಅವರನ್ನು ಎಲ್ಲಾ ರೀತಿ ನೋಡಿಕೊಳ್ಳುತ್ತಿರುವವರು ನನ್ನ ಪ್ರಶ್ನೆಗೆ ಉತ್ತರಿಸಬೇಕು ಎಂದರು.

ಮಾಜಿ ಸಚಿವ ಸಾ.ರಾ ಮಹೇಶ್ ವಿರುದ್ಧ ವಾಗ್ದಾಳಿ ನಡೆಸಿದರು ವೈಯುಕ್ತಿಕ ಹಾಗೂ ಏಕ ವಚನ ಬಳಸಿ ಟೀಕಾ ಪ್ರಹಾರ ನಡೆಸಿದರು.

ನಾವು ಜಮಿನ್ದಾರರು. ನಮ್ಮದು ಶ್ರೀಮಂತ ಕುಟುಂಬ. ನಾನು ಇಲ್ಲಿ ಎಲ್ಲೋ ಫಿಲಂ ಮಾಡಿಲ್ಲ. ಯಾರ ಮನೆಯ ಎಂಜಲು ತೊಳೆದಿಲ್ಲ. ರಾಮದಾಸ್ ಮನೆಯಲ್ಲಿ ಚಡ್ಡಿ ಒಗೆದಿಲ್ಲ. ನಾನು ನನ್ನ ಸಂಸಾರ ಉಳಿಸಲು ಮಾರಾಟ ಆದೆ ಅನ್ನೋ ಮಾತನ್ನು ಆಡಬೇಡ. ಹೇ ಅಯೋಗ್ಯ ಯಾರ ಬಗ್ಗೆ ಮಾತನಾಡ್ತಿಯಾ? ಎಂದು ಸಾರಾ ಮಹೇಶ್ ಕುರಿತು ವೈಯುಕ್ತಿಕವಾಗಿ ಟೀಕೆ ಮಾಡಿದರು.

ಏನಾದ್ರು ಇದ್ರೆ ಬಹಿರಂಗ ಚರ್ಚೆಗೆ ಬಾ. ಕುಮಾರಸ್ವಾಮಿ ನೋಡಿದ್ರೆ ಅಯ್ಯೋ ಪಾಪ ಅನ್ಸುತ್ತೆ. ನಿಮ್ಮ ಹಿಂದೆ ಇಂದು ಯಾರೂ ಇಲ್ಲ.

ಜಿಟಿಡಿ ನಿಮ್ಮ ನಾಯಕರೇ . ಅವರ ಬಗ್ಗೆ ಲಘುವಾಗಿ ಮಾತನಾಡ ಬೇಡಿ. ಅವರು   ಸಿಎಂ ಆಗಿದ್ದವರನ್ನು ಸೋಲಿಸಿದ್ದಾರೆ. ಸಿದ್ದರಾಮಯ್ಯ ಕೂಡ ಈ ರಾಜ್ಯದ ಸಿಎಂ ಆಗಿದ್ದವರು. ಯಾರ ಬಗ್ಗೆ ಆದ್ರು ಮಾತನಾಡುವಾಗ ಹಗುರವಾಗಿ ಮಾತನಾಡಬೇಡಿ ಎಂದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: