ಪ್ರಮುಖ ಸುದ್ದಿ

ಪ್ರಥಮ ದರ್ಜೆ ಕಾಲೇಜು ಹಳೇ ವಿದ್ಯಾರ್ಥಿ ಸಂಘದ ಸಭೆ

ರಾಜ್ಯ( ಮಡಿಕೇರಿ) ಸೆ.23 : – ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಳೇ ವಿದ್ಯಾರ್ಥಿ ಸಂಘದ ಉದ್ಘಾಟನೆಯು ಅ.11 ರಂದು ನಡೆಯಲಿದೆ.
ಸಂಘದ ರಚನೆ ಹಾಗೂ ಉದ್ಘಾಟನೆ ಸಂಬಂಧ ನಗರದ ಕಾಲೇಜು ಸಭಾಂಗಣದಲ್ಲಿ ಕಾಲೇಜ್‍ನ ಪ್ರಾಂಶುಪಾಲೆ ಹಾಗೂ ಸಂಘದ ಗೌರವಾಧ್ಯಕ್ಷೆ ಪ್ರೊ. ವೈ. ಚಿತ್ರಾ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ನಿರ್ಧರಿಸಲಾಯಿತು.
ಸಂಘದ ಸಂಚಾಲಕ ಡಾ. ಕೆ.ಸಿ.ದಯಾನಂದ ಮಾತನಾಡಿ, ಸಂಘವು ಅಸ್ತಿತ್ವಕ್ಕೆ ಬಂದು ವಿವಿಧ ಕಾರ್ಯಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕಿದೆ. ಆ ನಿಟ್ಟಿನಲ್ಲಿ ಮೊದಲ ಹಂತವಾಗಿ ಸಂಘಕ್ಕೆ ಅಧಿಕೃತ ಚಾಲನೆ ಸಿಗಬೇಕಿದೆ ಎಂದರು.
ಮುಂದಿನ ದಿನಗಳಲ್ಲಿ ಹಳೆ ವಿದ್ಯಾರ್ಥಿಗಳು ಸಂಘದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ಕಾಲೇಜಿನ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಕೋರಿದರು.
ಪ್ರಸಕ್ತ ಸಾಲಿನಿಂದ ಸಂಘದ ನೋಂದಣಿ ಮಾಡಿಸುವುದರೊಂದಿಗೆ ಇನ್ನು ಹೆಚ್ಚಿನ ಸದಸ್ಯರು ನೇಮಿಸಿ ಸಂಘಟಿಸಲು ಪ್ರಯತ್ನಿಸಲಾಗುವುದು ಎಂದು ಸಂಘದ ನೂತನ ಅಧ್ಯಕ್ಷ ಮುರುಗೇಶ್ ತಿಳಿಸಿದರು.
ಚಾಲನೆ ದಿನದಂದು ಗಣ್ಯರನ್ನು ಆಹ್ವಾನಿಸುವುದು, ವಿದ್ಯಾರ್ಥಿಗಳಿಗೆ ಭಾಷಣ ಸ್ಪರ್ಧೆ ಏರ್ಪಡಿಸುವ ಕುರಿತು ಚರ್ಚೆ ನಡೆಯಿತು.
ಪದಾಧಿಕಾರಿಗಳ ಆಯ್ಕೆ
ಗೌರವ ಅಧ್ಯಕ್ಷರಾಗಿ ಕಾಲೇಜು ಪ್ರಾಂಶುಪಾಲರಾದ ವೈ.ಚಿತ್ರಾ, ಅಧ್ಯಕ್ಷರಾಗಿ ಸಿ.ಆರ್. ಮುರುಗೇಶ್, ಉಪಾಧ್ಯಕ್ಷರಾಗಿ ಬಿ.ಪಿ. ವಿಕಾಶ್, ಕಾರ್ಯದರ್ಶಿಯಾಗಿ ಕೆ.ಪಿ.ಪ್ರತಾಪ್, ಮಹಿಳಾ ಪ್ರತಿನಿಧಿಯಾಗಿ ಸಲ್ಮಾ ಬಾನಂ, ಖಜಾಂಜಿ ಶಿವರಾಜ್, ಸಂಚಾಲಕರಾಗಿ ಕೆ.ಸಿ.ದಯಾನಂದ ಸೇರಿದಂತೆ ನೂತನ ನಿರ್ದೆಶಕರುಗಳನ್ನು ಇದೇ ಸಂದರ್ಭ ಆಯ್ಕೆ ಮಾಡಲಾಯಿತು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: