ಪ್ರಮುಖ ಸುದ್ದಿ

ಫೀ.ಮಾ.ಕಾರ್ಯಪ್ಪ ಕಾಲೇಜ್ ಪೋಷಕರ ಮತ್ತು ಶಿಕ್ಷಕರ ಸಂಘದ ಸಭೆ

ರಾಜ್ಯ( ಮಡಿಕೇರಿ) ಸೆ.23 :- ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಪೋಷಕ ಮತ್ತು ಶಿಕ್ಷಕರ ಸಂಘದ ವಾರ್ಷಿಕ ಸಾಮಾನ್ಯ ಮಂಡಳಿ ಸಭೆಯು ನಗರದ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಡಾ.ಜಗತ್ ತಿಮ್ಮಯ್ಯ ಅವರು ಮಾತನಾಡಿ ಮಕ್ಕಳು, ಪೋಷಕರ ಮತ್ತು ಶಿಕ್ಷಕರ ಬಾಂಧವ್ಯ ಉತ್ತಮವಾಗಿರಬೇಕು. ಇದರಿಂದ ಮಕ್ಕಳ ಭವಿಷ್ಯ ಉಜ್ವಲಗೊಳ್ಳಲು ಸಹಕಾರಿ ಎಂದರು.
ಮಕ್ಕಳು ಉತ್ತಮ ಶಿಕ್ಷಣ ಪಡೆಯಲು ಶಿಕ್ಷಕರ ಪ್ರಯತ್ನವೂ ಮುಖ್ಯ. ಹಾಗೆಯೇ ಪೋಷಕರ ಪ್ರಯತ್ನವು ಅತಿಮುಖ್ಯ. ಆದ್ದರಿಂದ ದಿನನಿತ್ಯ ಮಕ್ಕಳ ಚಲನವಲನ ಬಗ್ಗೆ ಪೋಷಕರು ಗಮನಹರಿಸಬೇಕು ಎಂದು ಪ್ರಾಂಶುಪಾಲರು ಹೇಳಿದರು.
ಪೋಷಕ ಮತ್ತು ಶಿಕ್ಷಕರ ಸಂಘದ ಅಧ್ಯಕ್ಷರಾದ ಆನಂದ್ ಅವರು ಮಾತನಾಡಿ ಮಕ್ಕಳು ಶಿಸ್ತು ಪಾಲನೆ, ಸಮಯ ಪ್ರಜ್ಞೆ ಹೊಂದಿರಬೇಕು. ಹಾಗೆಯೇ ಮಕ್ಕಳು ಮಾಡುವ ದಿನನಿತ್ಯ ಕಾರ್ಯ ಚಟುವಟಿಕೆ ಬಗ್ಗೆ ವಿಶೇಷ ನಿಗಾ ವಹಿಸಬೇಕು ಎಂದರು.
ಖಜಾಂಜಿಯಾದ ತಲ್ವರ್ ಅವರು 2018-19ನೇ ಸಾಲಿನ ಪ್ರಗತಿಪರ ವರದಿ ಮಂಡಿಸಿದರು. ಹಾಗೆಯೇ ಪದಾಧಿಕಾರಿಗಳ ಆಯ್ಕೆಯನ್ನು ಮಾಡಲಾಯಿತು. ಅಧ್ಯಕ್ಷರಾಗಿ ಮಾಥ್ಯೂ, ಉಪಾಧ್ಯಕ್ಷರಾಗಿ ವನಿತ, ಕಾರ್ಯದರ್ಶಿಯಾಗಿ ಮಹದೇವಯ್ಯ, ಜಂಟಿ ಕಾರ್ಯದರ್ಶಿಯಾಗಿ ಮಹೇಶ, ಖಜಾಂಜಿಯಾಗಿ ಮಂಜುನಾಥ್ ಅವರನ್ನು ಆಯ್ಕೆ ಮಾಡಲಾಯಿತು.
ಕಾರ್ಯದರ್ಶಿಯಾದ ಶ್ರೀಧರ್ ಹೆಗ್ಗಡೆ, ಜಂಟಿ ನಿರ್ದೇಶಕರಾದ ಮ್ಯಾಥ್ಯೂ, ಪೋಷಕ ಮತ್ತು ಶಿಕ್ಷಕರ ಸಂಘದ ಸದಸ್ಯರು ಪಾಲ್ಗೊಂಡಿದ್ದರು. ಕಾವ್ಯ ಪ್ರಾರ್ಥಿಸಿದರು. ಶ್ರೀಧರ್ ಹೆಗ್ಗಡೆ ಸ್ವಾಗತಿಸಿದರು, ಆನಂದ್ ಅವರು ನಿರೂಪಿಸಿದರು. ತಲ್ವರ್ ಅವರು ವಂದಿಸಿದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: