ದೇಶ

ಉಗ್ರರ ವಿಭಾಗವನ್ನು ಬೇಧಿಸಿದ ಪಂಜಾಬ್ ಪೊಲೀಸರು: ಬೃಹತ್ ಪ್ರಮಾಣದ ಶಸ್ತ್ರಾಸ್ತ್ರ ವಶ

ಚಂಡೀಗಡ,ಸೆ.23- ಖಲಿಸ್ತಾನ ಜಿಂದಾಬಾದ್ ಪಡೆ (ಕೆಝಡ್ಎಫ್)ಗೆ ಸೇರಿದ ಉಗ್ರರ ವಿಭಾಗವನ್ನು ಬೇಧಿಸಿದ ಪಂಜಾಬ್ ಪೊಲೀಸರು ಉಗ್ರರಿಂದ ಬೃಹತ್ ಪ್ರಮಾಣ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ.

ಬೆಳವಣಿಗೆಯ ಹಿನ್ನೆಲೆಯಲ್ಲಿ ಹೆಚ್ಚಿನ ತನಿಖೆಗಾಗಿ ಪ್ರಕರಣವನ್ನು ಎನ್ಐಎಗೆ ಹಸ್ತಾಂತರಿಸಲು ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ನಿರ್ಧರಿಸಿದ್ದಾರೆ.

ಪಂಜಾಬ್ ಹಾಗೂ ಇತರ ರಾಜ್ಯಗಳಲ್ಲಿ ವಿಧ್ವಂಸಕ ಕೃತ್ಯಗಳನ್ನು ನಡೆಸಲು ಸಂಚು ರೂಪಿಸುತ್ತಿದ್ದ ತಂಡದಿಂದ ಐದು ಎಕೆ 47 ರೈಫಲ್ಗಳು, ಪಿಸ್ತೂಲುಗಳು, ಉಪಗ್ರಹ ಫೋನ್ಗಳು ಮತ್ತು ಗ್ರೆನೇಡ್ಗನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪಾಕಿಸ್ತಾನ ಮತ್ತು ಜರ್ಮನಿ ಮೂಲದ ಉಗ್ರಗುಂಪುಗಳ ಬೆಂಬಲವನ್ನು ಖಲಿಸ್ತಾನ ಜಿಂದಾಬಾದ್ ಪಡೆ (ಕೆಝಡ್ಎಫ್) ಹೊಂದಿದೆ. ಉಗ್ರರಿಗೆ ಶಸ್ತ್ರಾಸ್ತ್ರಗಳನ್ನು ಮತ್ತು ಸಂವಹನ ಸಾಧನಗಳನ್ನು ಪೂರೈಸಲು ಡ್ರೋನ್ಗಳನ್ನು ಬಳಸಲಾಗಿತ್ತು ಎನ್ನುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. (ಎಂ.ಎನ್)

Leave a Reply

comments

Related Articles

error: