ಮೈಸೂರು

ಬಾಂಧವ್ಯ ‘ವಿಶೇಷ ಚೇತನರ ಕ್ರೀಡಾಕೂಟ’ ಫೆ.26ಕ್ಕೆ

ರೋಟರಿ ಮೈಸೂರು ಮಿಡ್‍ಟೌನ್‍ ನಿಂದ ‘‘ಬಾಂಧವ್ಯ-2017’ ಕಾರ್ಯಕ್ರಮದಂಗವಾಗಿ ವಿಶೇಷ ಚೇತನರಿಗೆ ಜಿಲ್ಲಾ ಮಟ್ಟದ ಒಲಂಪಿಕ್ಸ್ ಕ್ರೀಡಾಕೂಟವನ್ನು ಆಯೋಜಿಸಲಾಗಿದೆ ಎಂದು ರೋಟರಿ ಅಧ್ಯಕ್ಷ ಹರೀಶ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಫೆ.26, ಬೆಳಿಗ್ಗೆ 9.30ಕ್ಕೆ ಯೂನಿವರ್ ಸಿಟಿಯ ಓವಲ್ ಗ್ರೌಂಡ್‍ನಲ್ಲಿ ಆಯೋಜಿಸಿರುವ ಕ್ರೀಡಾಕೂಟಕ್ಕೆ ಪ್ರತಿಷ್ಠಿತ ಆಳ್ವಾಸ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳ ವೆಲ್‍ಫೇರ್ ಆಫೀಸರ್ ಸಬಿತ ಮೊನಿಸ್ ಚಾಲನೆ ನೀಡುವರು. ರೋಟರಿ ಗವರ್ನರ್ ರೋ.ನಾಗಾರ್ಜುನ್ ಅಧ್ಯಕ್ಷತೆ ವಹಿಸುವರು, 8-12 ವರ್ಷದೊಳಗಿನ ವಿಶೇಷ ಮಕ್ಕಳಿಗಾಗಿ ಆಯೋಜಿಸಿರುವ ಕ್ರೀಡಾಕೂಟದಲ್ಲಿ ಜಿಗಿತ ಉದ್ದಜಿಗಿತ, ಶಾಟ್‍ ಪುಟ್, ಥ್ರೋಬಾಲ್ ಟೆನ್ನಿಸ್ ಬಾಲ್‍ ಥ್ರೋ ಕ್ರೀಡೆಯನ್ನು ಆಯೋಜಿಸಲಾಗಿದೆ. ಕಳೆದ ಹತ್ತು ವರ್ಷಗಳಿಂದಲೂ ವಿಶೇಷ ಮಕ್ಕಳ ಕ್ರೀಡಾಕೂಟವನ್ನು ನಡೆಸುತ್ತಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದರು.

ಸಮಾರೋಪ ಸಮಾರಂಭ : ಸಂಜೆ 3ಕ್ಕೆ ನಡೆಯುವ ಸಮಾರೋಪದಲ್ಲಿ ರೋಟರಿ ಸಹಾಯಕ ಗವರ್ನರ್ ಅನಂತರಾಜ್ ಅರಸ್ ಹಾಗೂ ಮೈಸೂರು ವಿವಿಯ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಕೃಷ್ಣಯ್ಯ ಭಾಗವಹಿಸಿ ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡುವರು. ಚಿನ್ನ,ಬೆಳ್ಳಿ ಹಾಗೂ ಕಂಚಿನ ಪದಕ ಹಾಗೂ ಪ್ರಮಾಣ ಪತ್ರವನ್ನು ವಿಜೇತರಿಗೆ ವಿತರಿಸಲಾಗುವುದು ಎಂದು ತಿಳಿಸಿದರು.

ಕಾರ್ಯಕ್ರಮದ ಸಂಯೋಜಕ ಉಮೇಶ್ , ಕಾರ್ಯದರ್ಶಿ ಅಯ್ಯಣ್ಣ ಎ.ಎನ್. ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Leave a Reply

comments

Related Articles

error: