ಪ್ರಮುಖ ಸುದ್ದಿಮೈಸೂರು

ಅ.2ರಂದು ವಿಶ್ವಶಾಂತಿಗಾಗಿ ಧ‍್ಯಾನ ಪ್ರಾಣಾಯಾಮ ಉಚಿತ ಶಿಬಿರ

ಮೈಸೂರು,ಸೆ.23 : ರಾಷ್ಟ್ರಪಿತ ಮಹಾತ್ಮ ಗಾಂಧಿಜೀಯವರ 150ನೇ ಜನ್ಮದಿನಾಚರಣೆಯಂದು ವಿಶ್ವಶಾಂತಿಗಾಗಿ ಯೋಗ ಪ್ರಾಣ ವಿದ್ಯೆಯಿಂದ ಪ್ರೇಮಪೂರಿತ ಕರುಣೆಯ ಧ್ಯಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಚೈತ್ರ ತಿಳಿಸಿದರು.

ಸೋಮವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಅ.2ರ ಸಂಜೆ 4 ರಿಂದ 6.30ರವರೆಗೆ ಶಾರದದ ವಿಲಾಸ ಶತಮಾನೋತ್ಸವ ಭವನದಲ್ಲಿ ನಡೆಯುವ ಶಿಬಿರದಲ್ಲಿ ಸಾಮೂಹಿಕ ಧ್ಯಾನ, ಆರೋಗ್ಯಕ್ಕಾಗಿ ಪ್ರಾಣಾಮಯಕೋಶದ ಸಮತೋಲನ, ಸರಳ ಪ್ರಾಣಾಯಮ, ಆಂತರಿಕ ಶಾಂತಿಗಾಗಿ ಕ್ಷಮೆಯ ಸಾಧನೆ ಬಗ್ಗೆ ತಿಳಿಸಲಾಗುವುದು, ಪ್ರವೇಶ ಚಿತವಾಗಿದೆ ಎಂದು ತಿಳಿಸಿದರು.

ಈ ತರಬೇತಿಯಿಂದ ಮಾನಸಿಕ ಶಾಂತಿ, ದೈಹಿಕ ಆರೋಗ್ಯ, ಅನಾವಶ್ಯಕ ಯೋಚನೆಗಳಿಂದ ಮುಕ್ತಿ ದೊರೆಯಲಿದ್ದೆ, ಹೆಚ್ಚಿನ ಜನರು ಶಿಬಿರವನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ತಿಳಿಸಿದ್ದು, ವಿವರಗಳಿಗೆ ಮೊ.ಸಂ. 9844436233, 9591291510 ಅನ್ನು ಸಂಪರ್ಕಿಸಬಹುದೆಂದು ತಿಳಿಸಿದರು.

ಪೂರ್ಣಿಮಾ ಹಾಗೂ ಇತರರು ಗೋಷ್ಠಿಯಲ್ಲಿ ಇದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: