ಮೈಸೂರು

ದ್ವಿಚಕ್ರ ವಾಹನಕ್ಕೆ ಗುದ್ದಿದ ಕೆಎಸ್ ಆರ್ ಟಿಸಿ ಬಸ್ : ಸವಾರ ಸ್ಥಳದಲ್ಲೇ ಸಾವು

ಮೈಸೂರಿನ ಹಿನಕಲ್ ವೃತ್ತದಲ್ಲಿ ನಿಂತಿದ್ದ ದ್ವಿಚಕ್ರವಾಹನಕ್ಕೆ ರಾಜ್ಯ ಸಾರಿಗೆ ಸಂಸ್ಥೆಗೆ ಸೇರಿದ ಬಸ್ಸೊಂದು ಗುದ್ದಿದ ಪರಿಣಾಮ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಗುರುವಾರ ಮಧ್ಯಾಹ್ನ ಸಂಭವಿಸಿದೆ.

ಮೃತನನ್ನು ಪಾಲಹಳ್ಳಿಯ ಹೊಸಹಳ್ಳಿ ಗ್ರಾಮದ ನಿವಾಸಿ ರಾಮಯ್ಯ(55) ಎಂದು ಗುರುತಿಸಲಾಗಿದೆ. ಈತ ಹಿನಕಲ್ ವೃತ್ತದಲ್ಲಿ  ತನ್ನ ಫ್ಯಾಶನ್  ಪ್ಲಸ್ ಗಾಡಿಯಲ್ಲಿ ಸಿಗ್ನಲ್ ಕಾಯುತ್ತ ನಿಂತ ವೇಳೆ ಮಡಿಕೇರಿ ಕಡೆಯಿಂದ ವೇಗವಾಗಿ ಬಂದ ಬಸ್ ಈತನ ವಾಹನಕ್ಕೆ ಗುದ್ದಿದೆ. ಗುದ್ದಿದ ರಭಸಕ್ಕೆ ಈತ ತನ್ನ ಬಲ ಭಾಗಕ್ಕೆ ಬಿದ್ದಿದ್ದು, ಈತನ ತಲೆಯ ಮೇಲೆ ಬಸ್ ನ ಚಕ್ರ ಹರಿದಿದೆ. ಇದರಿಂದ ರಾಮಯ್ಯ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಸ್ಥಳಕ್ಕೆ ವಿವಿಪುರಂ ಠಾಣೆಯ  ಇನ್ಸಪೆಕ್ಟರ್ ವಿವೇಕಾನಂದ, ಸಬ್ ಇನ್ಸ್ ಪೆಕ್ಟರ್ ನರೇಂದ್ರಬಾಬು  ಹಾಗೂ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಕೆ.ಆರ್.ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಲಾಗಿದೆ.

ಬಸ್ ಚಾಲಕನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ವಿವಿಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

comments

Related Articles

error: