ಸುದ್ದಿ ಸಂಕ್ಷಿಪ್ತ

ರಾಜ್ಯ-ರಾಷ್ಟ್ರಮಟ್ಟದ ಬಾಷಣ ಸ್ಪರ್ಧೆ : ಅರ್ಜಿ ಆಹ್ವಾನ

ಮೈಸೂರು,ಸೆ.23 : ನೆಹರು ಯುವ ಕೇಂದ್ರ, ಮೈಸೂರು ವಿವಿಯ ಎನ್.ಎಸ್.ಎಸ್ ಘಟಕ, ಭಾರತ ಸರ್ಕಾರದ ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯ ಸಹಯೋಗದೊಂದಿಗೆ  ದೇಶಭಕ್ತಿ ಮತ್ತು ರಾಷ್ಟ್ರ ನಿರ್ಮಾಣದಲ್ಲಿ ಯುವಜನರು ವಿಷಯವಾಗಿ ರಾಜ್ಯ ಮತ್ತು ರಾಷ್ಟ್ರಮಟ್ಟದ ಭಾಷಣ ಸ್ಪರ್ಧೆಯನ್ನು ಅ.5ರ ಬೆಳಗ್ಗೆ 11 ಗಂಟೆಗೆ ಎನ್.ಎಸ್.ಎಸ್ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.

ಜಿಲ್ಲಾ ಮಟ್ಟದಲ್ಲಿ ಆಯ್ಕೆಯಾದವರು ಬೆಂಗಳೂರಿನಲ್ಲಿ ಜರುಗುವು ರಾಜ್ಯಮಟ್ಟದ ಸ್ಪರ್ಧೆಗೆ ಭಾಗವಹಿಸಲಿದ್ದು, ಇಲ್ಲಿ ಆಯ್ಕೆಯಾದವರು 2020ರ ಜ.15ರಂದು ನವದೆಹಲಿಯಲ್ಲಿ ಜರುಗುವ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಭಾಗಿಯಾಗಲಿದ್ದಾರೆ ಎಂದು ಜಿಲ್ಲಾ ಯುವಜನ ಸಮನ್ವಯಾಧಿಕಾರಿ ಎಸ್.ಸಿದ್ದರಾಮಪ್ಪ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: