ಮೈಸೂರು

ಪಿಂಚಣಿದಾರರ ಆಧಾರ್ ಜೋಡಣೆ ಕಡ್ಡಾಯ : ತಪ್ಪಿದಲ್ಲಿ ಪಿಂಚಣಿ ಸ್ಥಗಿತ

ಸಾಮಾಜಿಕ ಭದ್ರತಾ ಯೋಜನೆಗಳಡಿ ಪಿಂಚಣಿ ಪಡೆಯುತ್ತಿರುವ ಫಲಾನುಭವಿಗಳು ತಮ್ಮ ವಾಸಸ್ಥಳ/ವಿಳಾಸ ಬದಲಾವಣೆ ಮಾಡಿದ್ದಲ್ಲಿ, ತಮ್ಮ ವ್ಯಾಪ್ತಿಯ ಕಂದಾಯ ಅಧಿಕಾರಿಗಳಿಗೆ ಬದಲಾದ ವಿಳಾಸದ ಮಾಹಿತಿಯನ್ನು ಪಿಂಚಣಿ ಮಂಜೂರಾತಿ ನಿಯಮ 28ರ ಅನ್ವಯ ಕಡ್ಡಾಯವಾಗಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ಡಿ.ರಂದೀಪ್  ಕೋರಿದ್ದಾರೆ.

ಕೇಂದ್ರ ಸರ್ಕಾರದ ನೇರ ಹಣ ಸಂದಾಯ ಯೋಜನೆಯ (ಡಿಬಿಟಿ) ಅಡಿ ಪ್ರತಿಫಲಾನುಭವಿಯು ಸರ್ಕಾರದ ಸವಲತ್ತುಗಳನ್ನು ಪಡೆಯಲು ಆಧಾರ್ ಸಂಖ್ಯೆ, ಬ್ಯಾಂಕ್ ಅಥವಾ ಅಂಚೆ ಖಾತೆ ಸಂಖ್ಯೆ ಮತ್ತು ಆಧಾರ್ ಜೋಡಣೆಗೆ ಒಪ್ಪಿಗೆ ನೀಡುವುದು ಕಡ್ಡಾಯವಾಗಿದೆ ಎಂದು  ತಿಳಿಸಿದ್ದಾರೆ.

ಇದಕ್ಕೆ ಸಂಬಂಧಿಸಿದಂತೆ ಪ್ರಸ್ತುತ ಪಿಂಚಣಿ ಪಡೆಯುತ್ತಿರುವ ಫಲಾನುಭವಿಗಳು, ತಮ್ಮ ವಾಸಸ್ಥಳ ಬದಲಾವಣೆ ಮಾಡಿದ್ದಲ್ಲಿ, ಬದಲಾದ ವಿಳಾಸದ ಜೊತೆಗೆ ಆಧಾರ್ ಸಂಖ್ಯೆ, ಬ್ಯಾಂಕ್/ಖಾತೆ ವಿವರ ಮತ್ತು ಮೊಬೈಲ್ ಸಂಖ್ಯೆಯನ್ನು ಆಧಾರ್ ಜೋಡಣೆಯ ಒಪ್ಪಿಗೆ ಪತ್ರದೊಂದಿಗೆ ತಮ್ಮ ವ್ಯಾಪ್ತಿಯ ಕಂದಾಯ ಅಧಿಕಾರಿಗಳಿಗೆ ದಿನಾಂಕ ಫೆ.28 ರೊಳಗೆ ಖುದ್ದಾಗಿ ಸಲ್ಲಿಸಬೇಕೆಂದು ತಿಳಿಸಿದ್ದಾರೆ. ಇಲ್ಲವಾದಲ್ಲಿ ಪಿಂಚಣಿ ಪಾವತಿಯನ್ನು ಸ್ಥಗಿತಗೊಳಿಸಲಾಗುವುದು ಎಂದು  ಹೇಳಿದ್ದಾರೆ.

Leave a Reply

comments

Related Articles

error: