
ಪ್ರಮುಖ ಸುದ್ದಿಮೈಸೂರು
15ಕ್ಷೇತ್ರಗಳಲ್ಲಿಯೂ ಜೆಡಿಎಸ್ ಅಭ್ಯರ್ಥಿ ಕಣಕ್ಕೆ; ಏಕಾಂಗಿ ಸ್ಪರ್ಧೆ ; ಮಾಜಿ ಸಿಎಂ ಹೆಚ್. ಡಿ.ಕುಮಾರಸ್ವಾಮಿ ಸ್ಪಷ್ಟನೆ
ಮೈಸೂರು,ಸೆ.24:- ಹದಿನೈದು ವಿಧಾನಸಭಾ ಕ್ಷೇತ್ರಗಳಲ್ಲಿಯೂ ಜೆಡಿಎಸ್ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದ್ದು, ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದರು.
ಅವರಿಂದು ಮೈಸೂರಿನ ಜಯನಗರದಲ್ಲಿ ಮಾಧ್ಯಮದ ಪ್ರಶ್ನೆಗಳಿಗೆ ಉತ್ತರಿಸಿ ನಿನ್ನೆ ಮೂರ್ನಾಲ್ಕು ಕ್ಷೇತ್ರದ ಅಭ್ಯರ್ಥಿಗಳ ಆಯ್ಕೆ ಕುರಿತು ಚರ್ಚೆ ನಡೆದಿದೆ. 30ನೇ ತಾರೀಖು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿರುವುದರಿಂದ ಇನ್ನೆರಡು ದಿನಗಳಲ್ಲಿ ಅಭ್ಯರ್ಥಿಗಳ ಆಯ್ಕೆ ಪೂರ್ಣಗೊಳ್ಳಲಿದೆ ಎಂದರು. ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲಲು ಯಾವ ರೀತಿ ಸಂಘಟನೆ ಮಾಡಬೇಕೋ ಮಾಡುತ್ತಿದ್ದೇವೆ. ಚುನಾವಣೆ ಗೆಲ್ಲಬೇಕು ಎನ್ನುವುದಕ್ಕೆ ಆ ಕ್ಷೇತ್ರದ ಜನತೆಯ ವಿಶ್ವಾಸ ಗಳಿಸಬೇಕು. ನಮಗೆ ಯಾವ ಗೊಂದಲವೂ ಇಲ್ಲ. ಎಲ್ಲ ಪಕ್ಷಗಳಿಗೂ ಕೂಡ ಇದು ಅಗ್ನಿ ಪರೀಕ್ಷೆ. 24ನೇ ತಾರೀಖಿನಂದು ಬರುವ ಫಲಿತಾಂಶ ಏನೆಲ್ಲ ನಾಟಕ ನಡೆಸುತ್ತದೆ ನೋಡಬೇಕು. ಹೆಚ್ಚು ಹೆಚ್ಚು ಸ್ಥಳೀಯ ಕಾರ್ಯಕರ್ತರನ್ನೇ ಚುನಾವಣೆಗೆ ನಿಲ್ಲಿಸುತ್ತಿದ್ದೇವೆ ಎಂದು ತಿಳಿಸಿದರು. ಚುನಾವಣೆ ನಡೆದೇ ನಡೆಯುತ್ತದೆ ಇದರಲ್ಲಿ ಯಾವುದೇ ಸಂಶಯ ಬೇಡ. 15 ಕ್ಷೇತ್ರಗಳಲ್ಲಿ ಜೆ ಡಿ ಎಸ್ ಹೆಚ್ಚಿನ ಸ್ಥಾನ ಗೆಲ್ಲಲಿದೆ. ಗೆಲವು ಸಾಧಿಸಲು ಜೆ ಡಿ ಎಸ್ ತನ್ನದೇ ಅದ ರಾಜಕೀಯ ತಂತ್ರಗಾರಿಕೆ ಮಾಡಿದೆ. ಉಪ ಚುನಾವಣೆ ಫಲಿತಾಂಶದ ನಂತರ ಹೊಸ ನಾಟಕ ಆರಂಭವಾಗಲಿದೆ ಎಂದರು. (ಕೆ.ಎಸ್,ಎಸ್.ಎಚ್)