ಮೈಸೂರು

‘ಫೆ.27ರಿಂದ ಮಾ.5ರ’ವರೆಗೆ ಪತ್ರಕರ್ತರಿಗೆ ಉಚಿತ ಆರೋಗ್ಯ ತಪಾಸಣಾ ಸಪ್ತಾಹ

ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ಹಾಗೂ ಕಾವೇರಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಸಹಯೋಗದಲ್ಲಿ ಪತ್ರಕರ್ತರು ಹಾಗೂ ಕುಟುಂಬ ವರ್ಗದವರಿಗೆ ಉಚಿತ ಆರೋಗ್ಯ ತಪಾಸಣಾ ಸಪ್ತಾಹವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಆಧ್ಯಕ್ಷ ಕೆ.ದೀಪಕ್ ತಿಳಿಸಿದರು.

ಪತ್ರಕರ್ತರ ಭವನದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಫೆ.27ರಿಂದ ಮಾ.5ರವರೆಗೆ ಸಪ್ತಾಹವನ್ನು ಹಮ್ಮಿಕೊಂಡಿದ್ದು, ಕಾವೇರಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಡಾ.ಜಿ.ಆರ್.ಚಂದ್ರಶೇಖರ್ ಶಿಬಿರದ ನೇತೃತ್ವ ವಹಿಸುವರು, ಡಾ.ವೇಣು, ಡಾ.ರಾಜಗೋಪಾಲ್, ಡಾ.ಆದರ್ಶ್, ಡಾ.ಅರವಿಂದ್ ಹಾಗೂ ಇತರರು ಪಾಲ್ಗೊಂಡು ತಪಾಸಣೆ ನಡೆಸುವರು.ದಿನಂಪ್ರತಿ 50 ಜನರಿಗೆ ತಪಾಸಣೆ ನಡೆಸಲು ಅವಕಾಶವಿದ್ದು, ಹೆಸರು ನೋಂದಣಿ ಕಡ್ಡಾಯವಾಗಿದೆ ಎಂದು ತಿಳಿಸಿದರು.

ಆರೋಗ್ಯ ಸಪ್ತಾಹದಲ್ಲಿ ಅಧಿಕ ರಕ್ತದೊತ್ತಡ, ಇಸಿಜಿ, ಎಕೋ, ಟಿಎಂಟಿ, ರಕ್ತ, ಅಲ್ಟ್ರಾ ಸೌಂಡ್‍, ಪಿಪಿಬಿಎಸ್, ಲಿವರ್ ಕಾರ್ಯಕ್ಷಮತೆ ಸೇರಿದಂತೆ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಉಚಿತ ತಪಾಸಣೆ ಹಾಗೂ  ವೈದ್ಯರೊಂದಿಗೆ ಸಮಾಲೋಚನೆ ಮಾಡಬಹುದು ಎಂದು ತಿಳಿಸಿದ ಅವರು, ಸಮಯದ ಅಭಾವ, ಒತ್ತಡ ಬದುಕಿನಿಂದಾಗಿ ಪತ್ರಕರ್ತರು ತಮ್ಮ ಆರೋಗ್ಯವನ್ನು ಕಡೆಗಣಿಸುತ್ತಿದ್ದಾರೆ, ಕಳೆದ ಬಾರಿ ಅಪೋಲೋ ಆಸ್ಪತ್ರೆಯ ಸಹಯೋಗದಲ್ಲಿ 2 ದಿನಗಳ ಶಿಬಿರವನ್ನು ನಡೆಸಲಾಗಿತ್ತು ಇದೇ ಮೊದಲ ಬಾರಿಗೆ ಸಪ್ತಾಹವನ್ನು ಹಮ್ಮಿಕೊಳ್ಳಲಾಗಿದ್ದು ಪತ್ರಕರ್ತರು ಇದರ ಸದುಪಯೋಗಪಡಿಸಿಕೊಳ್ಳಿ ಎಂದು ಕರೆ ನೀಡಿದರು.

ಕಾರ್ಯದರ್ಶಿ ಕೆ.ಜಿ.ಲೋಕೇಶ್ ಬಾಬು, ಕಾವೇರಿ ಆಸ್ಪತ್ರೆಯ ಸಂದೀಪ್ ಪಾಟೀಲ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಹೆಸರು ನೋಂದಾವಣೆ  ಹಾಗೂ ಹೆಚ್ಚಿನ ಮಾಹಿತಿಗಾಗಿ ಅಧ್ಯಕ್ಷರು ಕೆ.ದೀಪಕ್ :97415113450, ಕಾರ್ಯದರ್ಶಿ ಕೆ.ಜಿ.ಲೋಕೇಶ್ ಬಾಬು : 9916892343 ಅನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು.

Leave a Reply

comments

Related Articles

error: