ಮೈಸೂರು

ಬೈಕ್ ಗೆ ಜೀಪ್ ಡಿಕ್ಕಿ ; ವಿದ್ಯಾರ್ಥಿ ಸಾವು ; ಹನಗೋಡು-ಹೆಮ್ಮಿಗೆ ರಸ್ತೆಯ ದೇವರಾಜ ಕಾಲನಿ ಬಳಿ ಘಟನೆ

ಮೈಸೂರು,ಸೆ.24:-    ಜೀಪ್‌  ಬೈಕೊಂದಕ್ಕೆ ಡಿಕ್ಕಿ ಹೊಡೆದ ಪರಿಣಾಮ ವಿದ್ಯಾರ್ಥಿಯೋರ್ವ ಮೃತಪಟ್ಟಿದ್ದು, ಇಬ್ಬರು ತೀವ್ರ ಗಾಯಗೊಂಡ ಘಟನೆ ಹುಣಸೂರಿನ ಹನಗೋಡು-ಹೆಮ್ಮಿಗೆ ರಸ್ತೆಯ ದೇವರಾಜ ಕಾಲನಿ ಬಳಿ ನಡೆದಿದೆ.

ಮೃತ ವಿದ್ಯಾರ್ಥಿಯನ್ನು ಹುಣಸೂರು ತಾಲೂಕಿನ ಹನಗೋಡು ಗ್ರಾಮದ ಚೆಲುವಯ್ಯ ಎಂಬವರ ಪುತ್ರ ಶಿವಾಜಿ (18) ಎಂದು ಗುರುತಿಸಲಾಗಿದ್ದು,  ಈತ ಹನಗೋಡು ಪದವಿ ಪೂರ್ವ ಕಾಲೇಜಿನ ಪಿಯುಸಿ ಓದುತ್ತಿದ್ದ. ಈತನೊಂದಿಗಿದ್ದ ಸ್ನೇಹಿತರಾದ ನವೀನ ಹಾಗೂ ಸಂದೀಪ್‌ ಎಂಬವರಿಗೂ ತೀವ್ರ ಗಾಯವಾಗಿದ್ದು, ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಭಾನುವಾರ ಕಾಲೇಜಿಗೆ ರಜೆ ಇದ್ದ ಕಾರಣ ಶಿವಾಜಿ ಸ್ನೇಹಿತರಾದ ಸಂದೀಪ್‌ ಹಾಗೂ ನವೀನ್‌ರೊಂದಿಗೆ ತನ್ನ ಬೈಕಿನಲ್ಲಿ ಸಮೀಪದ ಪಿರಿಯಾಪಟ್ಟಣ ತಾಲೂಕಿನ ಹಳ್ಳಿಯೊಂದಕ್ಕೆ ಕೂಲಿ ಕೆಲಸಕ್ಕೆ ತೆರಳಿದ್ದು, ರಾತ್ರಿ 11ರ ವೇಳೆ ವಾಪಸ್ಸಾಗುವಾಗ ಅಪಘಾತ ನಡೆದಿದೆ. ಮೂವರಿಗೂ ಕೈ, ಕಾಲುಗಳಿಗೆ ತೀವ್ರ ಪೆಟ್ಟಾಗಿದ್ದು, ಮೈಸೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಶಿವಾಜಿ ಮೃತಪಟ್ಟಿದ್ದಾನೆ. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: