ಮೈಸೂರು

 ರಕ್ತದಾನ ಮಾಡುವುದರಿಂದ ಮತ್ತೋರ್ವ ವ್ಯಕ್ತಿಯ  ಜೀವ ಕಾಪಾಡಬಹುದು : ಬಿ.ಎಸ್.ಪಾರ್ಥಸಾರಥಿ ಅಭಿಮತ

ಮೈಸೂರು, ಸೆ.24- ಶಾರದಾ ವಿಲಾಸ ವಿದ್ಯಾಸಂಸ್ಥೆಯ ಕಾನೂನು ಕಾಲೇಜಿನ ಆವರಣದಲ್ಲಿ ಇಂದು ಮೈಸೂರಿನ ಲಯನ್ಸ್ ಕ್ಲಬ್ ಹಾಗೂ ಜೀವಧಾರ ರಕ್ತನಿಧಿ ಇವರ ಸಂಯುಕ್ತಾಶ್ರಯದಲ್ಲಿ ಕಾನೂನು ಕಾಲೇಜಿನ ವಿದ್ಯಾರ್ಥಿಗಳಿಂದ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು.

ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಸಂಸ್ಥೆಯ ಅಧ್ಯಕ್ಷರಾದ ಬಿ.ಎಸ್.ಪಾರ್ಥಸಾರಥಿ  ಮಾತನಾಡಿ, ರಕ್ತದಾನ ಮನುಷ್ಯನ ಜೀವ ಕಾಪಾಡುವ ಮಹಾದಾನ, ಏಕೆಂದರೆ ರೋಗಿಯು ಕಷ್ಟದಲ್ಲಿರುವಾಗ, ಅನಾರೋಗ್ಯಕ್ಕೆ ತುತ್ತಾದಾಗ ಜೀವ ಉಳಿಸುವ ಸಂಜೀವಿನಿಯೇ ಈ ರಕ್ತದಾನ. ರಕ್ತದಾನ ಮಾಡುವುದರಿಂದ ಒಬ್ಬ ವ್ಯಕ್ತಿಯ ಜೀವವನ್ನು ಕಾಪಾಡುವುದರ ಜೊತೆಗೆ ರಕ್ತ ಕೊಡುವ ವ್ಯಕ್ತಿಯೂ ಕೂಡ ಆರೋಗ್ಯವನ್ನು ಸಮತೋಲನದಲ್ಲಿ ಕಾಪಾಡಿಕೊಳ್ಳಬಹುದೆಂದು ಅಭಿಪ್ರಾಯಪಟ್ಟರು.

ಸಮಾರಂಭದಲ್ಲಿ ಪಾಲ್ಗೊಂಡ ಮತ್ತೋರ್ವ  ಮುಖ್ಯ ಅತಿಥಿ,  ಸಂಸ್ಥೆಯ ಗೌರವ ಕಾರ್ಯದರ್ಶಿ ಹೆಚ್.ಕೆ.ಶ್ರೀನಾಥ್‍  ಮಾತನಾಡಿ, ಪ್ರತಿಯೊಬ್ಬ ಮನುಷ್ಯನಿಗೂ ಹಣ, ಅಂತಸ್ತು, ಆಸ್ತಿ ಬದುಕಲು ಬೇಕು. ಆದರೆ ಆರೋಗ್ಯವಿಲ್ಲದಿದ್ದರೆ ಈ ಐಷಾರಾಮಿ ಬದುಕು ನಿಷ್ಪ್ರಯೋಜಕ. ಆದ್ದರಿಂದ ರಕ್ತದಾನ ಮಾಡಿ ತಮ್ಮ ಕೈಲಾದ ಕೊಡುಗೆಯನ್ನು ಸಮಾಜಕ್ಕೆ ನೀಡುವುದು ನಮ್ಮೆಲ್ಲರ ಕರ್ತವ್ಯವಾಗಬೇಕೆಂದು ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಕಾನೂನು ಕಾಲೇಜಿನ ಪ್ರಾಂಶುಪಾಲ  ಎ.ವಿನೇಶ್‍  ಮಾತನಾಡಿ, ಕಾಲೇಜಿನ ವಿದ್ಯಾರ್ಥಿಗಳು ಪ್ರತಿ ವರ್ಷವೂ ಕೂಡ ರಕ್ತದಾನ ಶಿಬಿರದಲ್ಲಿ ಕಡ್ಡಾಯವಾಗಿ ಪಾಲ್ಗೊಂಡು ಒಬ್ಬ ವ್ಯಕ್ತಿಯ ಜೀವವನ್ನು ಕಾಪಾಡುವಲ್ಲಿ ಮುಂದಾಗಬೇಕೆಂದು ಕರೆ ನೀಡಿದರು.

ಈ ಸಂದರ್ಭ ಜೀವಧಾರ ರಕ್ತನಿಧಿ ಸಂಸ್ಥೆಯ ಹೊನ್ನೇಗೌಡ,   ಉಪನ್ಯಾಸಕರಾದ ರಾಜೇಂದ್ರಪ್ರಸಾದ್ ಹೊನ್ನಲಗೆರೆ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: