ಲೈಫ್ & ಸ್ಟೈಲ್

ಹೊಟ್ಟೆಯಲ್ಲಿನ ಬೊಜ್ಜು ಕರಗಿಸಲು ಇಲ್ಲಿದೆ ಸುಲಭ ಉಪಾಯ

ಆಧುನಿಕ ಜಗತ್ತಿನಲ್ಲಿ ಎಲ್ಲರೂ ಒತ್ತಡದ ಜೀವನ ನಡೆಸುತ್ತಿದ್ದಾರೆ. ಅವರವರ ಕುರಿತು ಕಾಳಜಿ ವಹಿಸಲು ಯಾರಿಗೂ ಸಾಧ್ಯವಾಗುತ್ತಿಲ್ಲ. ಆದರೂ ಸುಂದರವಾಗಿ ಕಾಣಲು ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ. ಸ್ತ್ರೀ-ಪುರುಷರೀರ್ವರೂ ತಮ್ಮ ತಮ್ಮ ಸೌಂದರ್ಯವನ್ನು ಉಳಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ. ಅದರಲ್ಲೂ ಬೊಜ್ಜಿನಿಂದ ಕೂಡಿದ ಹೊಟ್ಟೆ ಹಲವರ ನಿದ್ದೆಗೆಡಿಸುತ್ತಿದೆ.

ಯಾವುದಾದರೂ ಸಮಾರಂಭಗಳಲ್ಲಿ ಪಾಲ್ಗೊಂಡಾಗ  ಅಲ್ಲಿ ಸ್ಲಿಮ್ ಆಗಿರುವವರು ಕಂಡರೆ ಅದೇನೋ ಮುಜುಗರ. ತಾನೂ ಅವರಾಗೆ ಇದ್ದಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಎಂಬ ಭಾವ ಕಾಡದೇ ಇರದು. ಹೊಟ್ಟೆಯಲ್ಲಿನ ಬೊಜ್ಜು ಕರಗಿಸಿ ಸುಂದರವಾಗಿ ಕಾಣಲು ಇಲ್ಲಿದೆ ಕೆಲವು ಸಲಹೆ:

ಕಡಿಮೆ ಆಹಾರ ತೆಗೆದುಕೊಳ್ಳಿ

ದಿನದಲ್ಲಿ 2-3ಸಲ ಹೆಚ್ಚು ಆಹಾರ ತೆಗೆದುಕೊಳ್ಳುವ ಬದಲು 5-6 ಸಲ ಸ್ವಲ್ಪ ಸ್ವಲ್ಪವೇ ಆಹಾರ ತೆಗೆದುಕೊಳ್ಳಿ.ಹೆಚ್ಚು ಕ್ಯಾಲರಿಯುಕ್ತ ಆಹಾರವನ್ನು ತ್ಯಜಿಸಿ.

ಎಣ್ಣೆಯುಕ್ತ ಆಹಾರವನ್ನು ಕಡಿಮೆ ಮಾಡಿ

ಎಲ್ಲರಿಗೂ ಎಣ್ಣೆಯುಕ್ತ ಆಹಾರವೆಂದರೆ ತುಂಬಾನೇ ಇಷ್ಟ. ತುಂಬಾ ಎಣ್ಣೆ ಬಳಸಿ ತಯಾರಿಸಿದ ತಿಂಡಿಗಳಲ್ಲಿ ಕ್ಯಾಲರಿಗಳು ಜಾಸ್ತಿ ಇರುವುದರಿಂದ ಕೊಬ್ಬಿನಂಶ ಶೇಖರವಾಗುತ್ತದೆ. ಇದರಿಂದ ಬೊಜ್ಜು ಬೇಡವೆಂದರೂ ನಮ್ಮನ್ನು ಹುಡುಕಿ ಬರುತ್ತದೆ.

ಉಪ್ಪನ್ನು ಹಿತಮಿತವಾಗಿ ಬಳಸಿ

ಹೊಟ್ಟೆಯಲ್ಲಿನ ಬೊಜ್ಜು ಕರಗುವಿಕೆಗೆ ಉಪ್ಪಿನ ಕಡಿಮೆ ಬಳಕೆ ತುಂಬಾನೇ ಅಗತ್ಯ. ಆಹಾರದಲ್ಲಿ ಉಪ್ಪಿನ ಪ್ರಮಾಣವನ್ನು ಕಡಿಮೆ ಬಳಸಿದಲ್ಲಿ ತಕ್ಷಣವೇ ಅದರ ಪರಿಣಾಮ ತಿಳಿಯಲಿದೆ.

ಕಡಿಮೆ ಪ್ರಮಾಣದಲ್ಲಿ ಸಕ್ಕರೆ ಬಳಸಿ

ಸಿಹಿ ಪದಾರ್ಥ ಎಲ್ಲರಿಗೂ ಪ್ರಿಯವಾಗಿದ್ದು ಇದರ ಸೇವನೆಯಿಂದ ಆರೋಗ್ಯಕ್ಕಿಂತ ಅನಾರೋಗ್ಯಗಳೇ ಕಾಣಿಸಿಕೊಳ್ಳೋದು ಜಾಸ್ತಿ. ಇದರಿಂದ ಹಿತಮಿತವಾಗಿ ಬಳಸಿ.

ಆಹಾರ ಮತ್ತು ನಿದ್ರೆಯ ನಡುವೆ ಅಂತರವಿರಲಿ

ಆಹಾರ ಸೇವಿಸಿದ ತಕ್ಷಣವೇ ನಿದ್ದೆ ಮಾಡಲು ತೆರಳಬೇಡಿ ಇದರಿಂದ ಜೀರ್ಣಕ್ರಿಯೆ ಸರಳವಾಗಿ ನಡೆಯುವುದಿಲ್ಲ. ಆಹಾರ ಸೇವಿಸಿದ ಬಳಿಕ ಕನಿಷ್ಠ 3 ಗಂಟೆಗಳ ಅಂತರವಿರಲಿ.

ಮಾಂಸಾಹಾರಗಳಿಂದ ದೂರವಿರಿ

ಮಾಂಸಾಹಾರಗಳು ದೇಹಕ್ಕೆ ಪ್ರೋಟೀನ್ ಒದಗಿಸುತ್ತವೆಯಾದರೂ ಇದರಿಂದ ಬಹುಬೇಗ ಬೊಜ್ಜು ಶೇಖರಗೊಳ್ಳುತ್ತವೆ. ಮಾಂಸಾಹಾರ ಸೇವನೆ ಆದಷ್ಟು ಕಡಿಮೆ ಮಾಡಿ.

ಹೆಚ್ಚು ನೀರು ಕುಡಿಯಿರಿ

ಪದೇ ಪದೇ ನೀರಿನ ಸೇವನೆಯು ಮನುಷ್ಯನನನ್ನು ಚೈತನ್ಯಪೂರ್ಣವಾಗಿ ಇರಿಸಬಲ್ಲುದು. ದೇಹದಲ್ಲಿನ ಕಲ್ಮಶಗಳನ್ನು ಹೊರಹಾಕಿ ದೇಹವನ್ನು ಸುಸ್ಥಿತಿಯಲ್ಲಿಡಲು ಪದೇ ಪದೇ ನೀರನ್ನು ಸೇವಿಸುತ್ತಿರಿ.

ಒತ್ತಡದಿಂದ ದೂರವಿರಿ

ಇಂದು ಜೀವನದಲ್ಲಿ ಒತ್ತಡಗಳೇ ಜಾಸ್ತಿ. ಆದರೂ ಯಾವುದೇ ಒತ್ತಡಕ್ಕೂ ಒಳಗಾಗದೆ ನಿರಾತಂಕವಾಗಿರಿ. ಈ ಎಲ್ಲ ಸಲಹೆಗಳನ್ನು ಪಾಲಿಸಿದಲ್ಲಿ ಕೆಲವೇ ದಿನಗಳಲ್ಲಿ ನಿಮ್ಮ ಹೊಟ್ಟೆಯಲ್ಲಿನ ಬೊಜ್ಜು ಕರಗಿ ಸುಂದರವಾಗಿ ಕಾಣುವುದರಲ್ಲಿ ಯಾವುದೇ ಸಂದೇಹವಿಲ್ಲ.

Leave a Reply

comments

Related Articles

error: