ಸುದ್ದಿ ಸಂಕ್ಷಿಪ್ತ
ರಕ್ತ ಗುಂಪು ತಪಾಸಣೆ- ರಕ್ತದಾನ ಶಿಬಿರ ನಾಳೆ
ಮೈಸೂರು,ಸೆ.24 : ಮೈವಿವಿಯ ಟಿಟಿಎಲ್ ವಿದ್ಯಾಸಂಸ್ಥೆಗಳು, ಟಿ.ಟಿ.ಎಲ್. ವಾಣಿಜ್ಯ ವ್ಯವಹಾರ ನಿರ್ವಹಣಾ ಕಾಲೇಜು ವತಿಯಿಂದ ಕಾಲೇಜು ಸಂಸ್ಥಾಪಕರ ದಿನಾಚರಣೆ ಅಂಗವಾಗಿ ಕಾಲೇಜಿನ ಎನ್.ಎಸ್.ಎಸ್ ಘಟಕ, ಯುವ ರೆಡ್ ಕ್ರಾಸ್ ಘಟಕದಿಂದ ರಕ್ತ ಗುಂಪು ತಪಾಸಣೆ ಮತ್ತು ರಕ್ತದಾನ ಶಿಬಿರವನ್ನು ಸೆ.25ರ ಬೆಳಗ್ಗೆ 9.45ಕ್ಕೆ ಕಾಲೇಜಿನ ಆವರಣದಲ್ಲಿ ಏರ್ಪಡಿಸಲಾಗಿದೆ.
ಟಿ.ಟಿ.ಎಲ್. ಟ್ರಸ್ಟ್ ಕಾರ್ಯದರ್ಶಿ ಮಲ್ಲೇಶ್ ಬಾಬು ಅಧ್ಯಕ್ಷತೆ ವಹಿಸುವರು ಕಾರ್ಯನಿರ್ವಾಹಕ ಕಾರ್ಯದರ್ಶಿ ಪ್ರೊ.ಎಚ್.ಎಸ್.ಅಶ್ವಥನಾರಾಯಣ, ಜೀವನಧಾರ ಬ್ಲಡ್ ಬ್ಯಾಂಕ್ ನ ಡಾ.ಎಚ್.ಎಸ್.ಕಿರಣ್ ಕುಮಾರ್, ಸಹ ಉಪಾಧ್ಯಕ್ಷ ಕೆ.ಆರ್.ಕರ್, ಆಡಳಿತಾಧಿಕಾರಿ ಡಾ.ಬಿ.ವಿ.ಪ್ರಶಾಂತ್, ಪ್ರಾಂಶುಪಾಲರಾದ ಡಾ.ಎಂ.ಪ್ರೀತಿ ಇತರರು ಹಾಜರಿರಲಿದ್ದಾರೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ. (ಕೆ.ಎಂ.ಆರ್)