ಮೈಸೂರು

ಅರಮನೆಯಲ್ಲಿ ನಡೆದ ಸಿಂಹಾಸನ ಜೋಡಣೆ ಕಾರ್ಯ

ಮೈಸೂರು,ಸೆ.25:-  ಮೈಸೂರು ದಸರಾದಲ್ಲಿನ  ರಾಜವಂಶಸ್ಥರ ಖಾಸಗಿ ದರ್ಬಾರ್​ಗೆ ಸಿದ್ಧತೆಗಳು ಆರಂಭಗೊಂಡಿದ್ದು, ಅರಮನೆಯಲ್ಲಿ ಸಿಂಹಾಸನ ಜೋಡಣೆ ಕಾರ್ಯಕ್ಕೆ ನಿನ್ನೆ ಚಾಲನೆ ನೀಡಲಾಯಿತು. ದಸರಾ ಉದ್ಘಾಟನೆಗೆ ಇನ್ನು ಮೂರು ದಿನ ಬಾಕಿ ಉಳಿದಿರುವಂತೆಯೇ ಭದ್ರತಾ ಕೋಣೆಯಲ್ಲಿದ್ದ ಚಿನ್ನದ ಸಿಂಹಾಸನವನ್ನು ಹೊರ ತೆಗೆದು ಅರಮನೆಯ ದರ್ಬಾರ್ ಹಾಲ್​ನಲ್ಲಿ ಇಡಲಾಯಿತು.

ಬೆಳಿಗ್ಗೆ 10.45ರಿಂದ 11.30ಕ್ಕೆ ಸಲ್ಲುವ ಶುಭ ವೃಶ್ಚಿಕ ಲಗ್ನದಲ್ಲಿ ಜೋಡಣೆ ಕಾರ್ಯ ನಡೆಸಲಾಗಿದ್ದು, ದಸರಾ ಉದ್ಘಾಟನೆ ದಿನ ಸೆ.29ರಂದು ಪೂರ್ಣ ಪ್ರಮಾಣದಲ್ಲಿ ಆಸನಕ್ಕೆ ಸಿಂಹಗಳನ್ನು ಜೋಡಣೆ ಮಾಡಿ ಪೂಜೆ ನೆರವೇರಿಸಿದ ಬಳಿಕ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಸಿಂಹಾಸನಾರೋಹಣ ಮಾಡಲಿದ್ದಾರೆ. ದಸರಾ ಅವಧಿಯಲ್ಲಿ ನಿಗದಿತ ಸಮಯದಲ್ಲಿ ಸಾರ್ವಜನಿಕರಿಗೂ ಸಿಂಹಾಸನ ವೀಕ್ಷಣೆಗೆ ಅವಕಾಶ ಇರಲಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: