ಮೈಸೂರು

ಮಳೆಯಿಂದ ಅಂಬಾವಿಲಾಸ ಅರಮನೆಯ ಎಡಭಾಗದ ಛಾವಣಿಯ ಅಂಚು ಕುಸಿತ

ಮೈಸೂರು, ಸೆ.25:- ನಗರದಲ್ಲಿ ಎರಡು ದಿನಗಳ ಕಾಲ ಸುರಿದ ಮಳೆಯಿಂದಾಗಿ ಅಂಬಾವಿಲಾಸ ಅರಮನೆಯ ಎಡಭಾಗದ ಛಾವಣಿಯಲ್ಲಿ ಇರುವ ತ್ರಿಕೋನಾಕಾರದ ಒಂದು ಬದಿಯ ಅಂಚು ಕುಸಿದಿದೆ.

ಅರಮನೆಯಲ್ಲಿರುವ ಸೆಸ್ಕ್ ಕಚೇರಿಯ ಹಿಂಭಾಗ ಶೌಚಗೃಹದ ಮೇಲಂತಸ್ತಿಯ ಛಾವಣಿಯಲ್ಲಿ ಈ ಸಮಸ್ಯೆ ಕಾಣಸಿದ್ದು, ಶತಮಾನ ಕಂಡಿರುವ ಅರಮನೆಯನ್ನು ಸುಣ್ಣ ಗಾರೆಯಿಂದ ನಿರ್ಮಿಸಲಾಗಿದೆ.  ವರ್ಷಗಳು ಕಳೆದಂತೆ ಅದನ್ನು ನಿರ್ವಹಣೆ ಮಾಡದೆ ಈ ಸಮಸ್ಯೆ ಉಂಟಾಗಿದೆ ಎನ್ನಲಾಗಿದೆ.

ಅರಮನೆ ಆಡಳಿತ ಮಂಡಳಿ ಉಪ ನಿರ್ದೇಶಕ ಟಿ.ಎಸ್.ಸುಬ್ರಹ್ಮಣ್ಯ ಮಾಹಿತಿ ನೀಡಿ ಅರಮನೆ ಸೇರಿದಂತೆ ರಾಜವಂಶಸ್ಥರು ವಾಸಿಸುವ ಜಾಗದಲ್ಲಿ ಮಳೆಗಾಲದಲ್ಲಿ ಸಣ್ಣ ಪುಟ್ಟ ಸಮಸ್ಯೆ ಉಂಟಾಗುತ್ತಿದೆ. ಕೆಲ ವರ್ಷಗಳ ಹಿಂದೆ ದರ್ಬಾರ್ ಹಾಲ್, ಕಲ್ಯಾಣ ಮಂಟಪದ ಗೋಪುರಗಳಿಂದ ಮಳೆ ನೀರು ಸೋರುತ್ತಿದ್ದು, ದುರಸ್ತಿ ಕಾರ್ಯ ಮಾಡಲಾಗುತ್ತಿದೆ. ಅರಮನೆ ಪಾರಂಪರಿಕವಾಗಿರುವುದರಿಂದ ಪಾರಂಪರಿಕ ತಜ್ಞರ ಸಲಹೆ ಮೇರೆಗೆ ದುರಸ್ತಿ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಈಗ ಸುರಿಯುತ್ತಿರುವ ಮಳೆಯಿಂದ ಛಾವಣಿಯ ಅಂಚು ಸ್ವಲ್ಪ ಭಾಗ ಕುಸಿದಿದ್ದು, ತಜ್ಞರ ಅಭಿಪ್ರಾಯ ಪಡೆದು ದುರಸ್ತಿ ಕಾರ್ಯ ಮಾಡಲಾಗುವುದು ಎಂದು ಹೇಳಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: