ಪ್ರಮುಖ ಸುದ್ದಿ

ಕಲೆಗಳನ್ನು  ಮರೆಯುತ್ತಿದ್ದು, ಕಲೆಯನ್ನು ಉಳಿಸಲೋಸುಗ ಸಾಂಸ್ಕೃತಿಕ  ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ : ನಾಗರಾಜು

ರಾಜ್ಯ(ಮಂಡ್ಯ)ಸೆ.25:-  ಪದವಿ ಪೂರ್ವಶಿಕ್ಷಣ ಇಲಾಖೆ, ಮತ್ತು ಮಳವಳ್ಳಿ ಶಾಂತಿ ಪದವಿ ಪೂರ್ವಕಾಲೇಜು ವತಿಯಿಂದ  ತಾಲೂಕು ಮಟ್ಟದ ಸಾಂಸ್ಕೃತಿಕ ಚಟುವಟಿಕೆಗಳ ಸ್ಪರ್ಧೆಯ ಉದ್ಘಾಟನೆ ಸಮಾರಂಭ ಮಳವಳ್ಳಿ ಪಟ್ಟಣದ  ಶಾಂತಿ ಕಾಲೇಜು ಕಾನ್ಛರೆನ್ಸ್ ಹಾಲ್ ನಲ್ಲಿ ನಡೆಸಲಾಯಿತು.

ಕಾರ್ಯಕ್ರಮವನ್ನು ಕಿರುಗಾವಲು ಪದವಿ ಪೂರ್ವಕಾಲೇಜು ಪ್ರಾಂಶುಪಾಲ ನಾಗರಾಜು ಉದ್ಘಾಟಿಸಿ  ಮಾತನಾಡಿ  ಇತ್ತೀಚಿಗೆ  ಕಲೆಗಳನ್ನು  ಮರೆಯುತ್ತಿದ್ದು, ಕಲೆಯನ್ನು ಉಳಿಸಲೋಸುಗ ಕಾಲೇಜು, ಪ್ರಾಥಮಿಕ, ಪ್ರೌಢಶಾಲಾ ಮಟ್ಟದಲ್ಲಿ  ಸಾಂಸ್ಕೃತಿಕ  ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದರು.

ಕಾರ್ಯಕ್ರಮದ ಶಾಂತಿ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಎಂ ಹೆಚ್ ಕೆಂಪಯ್ಯ,ಅಧ್ಯಕ್ಷತೆ ವಹಿಸಿ ಮಾತನಾಡಿ,  ಶಾಂತಿ ಕಾಲೇಜು ಪ್ರಾರಂಭವಾಗಿ ಮುಂದಿನ ವರ್ಷಕ್ಕೆ 50 ವರ್ಷ ಪೂರೈಸುತ್ತಿದ್ದು, ಶಾಂತಿಕಾಲೇಜು ಸಂಸ್ಥಾಪಕರಾದ.ದಿ. ಮಾಜಿ ಸಚಿವ ಕೆ.ಎನ್ ನಾಗೇಗೌಡರ  ಶ್ರದ್ಧೆಯ ಫಲವಾಗಿ ಈ ಕಾಲೇಜು ಪ್ರಾರಂಭವಾಗಿದೆ , ಅವರ ಹೆಸರನ್ನು ಉಳಿಸಬೇಕಾಗಿದೆ‌ . ಅದಕ್ಕಾಗಿ ಹಲವು  ಅಭಿವೃದ್ದಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಲ್ಲರೂ   ಸಹಕಾರ ನೀಡಬೇಕು ಎಂದರು.

ಕಾರ್ಯಕ್ರಮದಲ್ಲಿ ಶಾಂತಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಎಂ.ಸಿ ಶಿವಪ್ಪ,  ಸರ್ಕಾರಿ ಬಾಲಕಿಯರ ಪದವಿಪೂರ್ವಕಾಲೇಜು ಹೆಚ್, ವಿ  ನಿಂಗರಾಜು,  ದುಗ್ಗನಹಳ್ಳಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಬೋರಲಿಂಗಯ್ಯ,  ಶಂಕರೇಗೌಡ,  ಉಪನ್ಯಾಸಕ ರಂಗಸ್ವಾಮಿ, ಸಿ ಅನಿತಾ ಸೇರಿದಂತೆ ಮತ್ತಿತರರು ಇದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: