ಕರ್ನಾಟಕ

ರೈತರು ಬೆಳೆದ ಕಬ್ಬನ್ನು ಜರೂರಾಗಿ ಕಟಾವು ಮಾಡಲು ಮಂಡ್ಯ ಡಿ.ಸಿ ಸೂಚನೆ

ಮಂಡ್ಯ (ಸೆ.25): ರೈತರು ಬೆಳೆದಿರುವ ಕಬ್ಬು ಕಟಾವಿಗೆ ಬಂದಿದ್ದು ಜರೂರಾಗಿ ಕಬ್ಬುನ್ನು ಕಟಾವು ಮಾಡುವಂತೆ ಸಕ್ಕರೆ ಕಾರ್ಖಾನೆಯ ಅಧಿಕಾರಿಗಳಿಗೆ ಮಂಡ್ಯ ಜಿಲ್ಲಾಧಿಕಾರಿಗಳಾದ ಡಾ.ಎಂ.ವಿ.ವೆಂಕಟೇಶ್ ಅವರು ಸೂಚಿಸಿದರು. ಅವರು ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಕಬ್ಬು ನುರಿಸುವ ಸಂಬಂಧ ಸಕ್ಕರೆ ಕಾರ್ಖಾನೆಗಳ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಎಲ್ಲಾ ಕಾರ್ಖಾನೆಯವರು ಕಬ್ಬು ನುರಿಸುವ ಸಾಮರ್ಥ್ಯವನ್ನು ಹಾಗೂ ಸಾಗಾಣಿಕೆ ಲಾರಿಗಳನ್ನು ಹೆಚ್ಚಿಸಿ ರೈತರು ಬೆಳೆದ ಕಬ್ಬನ್ನು ಆದಷ್ಟು ಬೇಗ ಕಟಾವು ಮಾಡುವಂತೆ ಸೂಚಿಸಿದ ಜಿಲ್ಲಾಧಿಕಾರಿಗಳು, ಅವಧಿ ಪೂರ್ಣಗೊಂಡು ಕಟಾವಿಗೆ ಬಂದಿರುವ ಕಬ್ಬನ್ನು ಪರಿಶೀಲಿಸಿ, ಕಬ್ಬು ಕಟಾವು ಕಾರ್ಮಿಕರ ಸಂಖ್ಯೆಯನ್ನು ಹೆಚ್ಚಿಸಿಕೊಂಡು ಆದ್ಯತೆಯ ಮೇಲೆ ಕಟಾವು ಮಾಡಲು ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು.

ಸಭೆಯಲ್ಲಿ ಜಂಟಿ ಕೃಷಿ ನಿರ್ದೇಶಕರು ಕೂಳೆ ಕಬ್ಬನ್ನು ಅಕ್ಟೋಬರ್ ಮಾಹೆಯಲ್ಲಿ ಕಟಾವು ಮಾಡಿದಲ್ಲಿ ವೈಜ್ಞಾನಿಕವಾಗಿ ರೈತರಿಗೆ ಹೆಚ್ಚಾಗಿ ಇಳುವರಿ ದೊರೆಯುತ್ತದೆ ಎಂದು ತಿಳಿಸಿದ್ದರಿಂದ ಅದರಂತೆ ಕ್ರಮವಹಿಸಲು ಜಿಲ್ಲಾಧಿಕಾರಿಗಳು ಸೂಚಿಸಿದರು.

ಪ್ರಸ್ತುತ ಜಿಲ್ಲೆಯ ರೈತರು ಕಬ್ಬು ಕಟಾವಣೆ ಕಾರ್ಯವು ವಿಳಂಬವಾಗುತ್ತರುವುದರಿಂದ ತಮಿಳುನಾಡಿನ ಶಕ್ತಿ ಷುಗರ್ಸ್ ಮತ್ತು ಬನ್ನಾರಿ ಸಕ್ಕರೆ ಕಾರ್ಖಾನೆರವರು ಜಿಲ್ಲೆಯ ರೈತರು ಕಬ್ಬನ್ನು ಕಟಾವು ಮಾಡಿಸಿ ಸಾಗಾಣಿಕೆ ಮಾಡಲು ಮುಂದೆ ಬಂದಿರುತ್ತಾರೆ ಎಂದು ಸಭೆಯಲ್ಲಿ ತಿಳಿಸಿದರು.

ಸಭೆಯಲ್ಲಿ ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆಯ ಉಪನಿರ್ದೇಶಕರಾದ ಕುಮುದಾ ಶರತ್, ಜಂಟಿ ಕೃಷಿ ನಿರ್ದೇಶಕರಾದ ರಾಜಶೇಖರ್ ಹಾಗೂ ಸಕ್ಕರೆ ಕಾರ್ಖಾನೆಯ ಅಧಿಕಾರಿಗಳು ಉಪಸ್ಥಿತರಿದ್ದರು. (ಎನ್.ಬಿ)

Leave a Reply

comments

Related Articles

error: