ಸುದ್ದಿ ಸಂಕ್ಷಿಪ್ತ

ಸೆ.27ರಂದು ವಿಚಾರ ಸಂಕಿರಣ

ಮೈಸೂರು,ಸೆ.25 : ಕರ್ನಾಟಕ ರಾಜ್ಯ ಕಾನೂನು ಕಾಲೇಜು ನವನಗರ ಹುಬ್ಬಳ್ಳಿ ಹಾಗೂ ಶಾರದ ವಿಲಾಸ ಕಾನೂನು ಕಾಲೇಜ ಸಹಯೋಗದಲ್ಲಿ ವಿಚಾರ ಸಂಕಿರಣವನ್ನು ಸೆ.27ರ ಬೆಳಗ್ಗೆ 10ಕ್ಕೆ ಕಾಲೇಜು ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.

ಕರ್ನಾಟಕ ಕಾನೂನು ಕಾಲೇಜಿನ ಕುಲಪತಿಗಳಾದ ಪ್ರೊ.ಡಾ.ಪಿ.ಈಶ್ವರ ಭಟ್ ಮುಖ್ಯ ಅತಿಥಿಯಾಗಿರುವರು, ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಬಿ.ಎಸ್.ಪಾರ್ಥಸಾರಥಿ ಅಧ್ಯಕ್ಷತೆ. ಕಾರ್ಯದರ್ಶಿ ಹೆಚ್.ಕೆ.ಶ್ರೀಕಾಂತ ಇರುವರು. ಮೈವಿವಿ ಕಾನೂನು ಕಾಲೇಜಿನ ಪ್ರೊ.ಡಾ.ಸಿ.ಕೆ.ಎನ್.ರಾಜು ಅವರು ಕೌಟಿಲ್ಯನ ಅರ್ಥಶಾಸ್ತ್ರದ ಬಗ್ಗೆ ಮಾತನಾಡಲಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: