ಸುದ್ದಿ ಸಂಕ್ಷಿಪ್ತ
ಸೆ.29 ರಿಂದ ಶಾರದಾಶರನ್ನವರಾತ್ರೋತ್ಸವ
ಮೈಸೂರು,ಸೆ.25 : ಶ್ರೀಜಗದ್ಗುರು ಶಂಕರಾಚಾರ್ಯ ಮಹಾಸಂಸ್ಥಾನ ಶಾರದಾಪೀಠ ಶೃಂಗೇರಿ ವತಿಯಿಂದ ಶಾರದಾಶರನ್ನವರಾತ್ರೋತ್ಸವವನ್ನು ಸೆ.29 ರಿಂದ ಅ.8ರವರೆಗೆ ಹಮ್ಮಿಕೊಳ್ಳಲಾಗಿದೆ.
ಸೆ.29ರ ಬೆಳಗ್ಗೆ ಪುರುಷಸೂಕ್ತ ಹೋಮ, 30 ಶ್ರೀಸೂಕ್ತ ಹೋಮ, ಅ.1 ರುದ್ರೈಕಾರಶಿನೀ ಹೋಮ, ಅ.2 ಸಹಸ್ರ ಮೋದಕ ಗಣಪತಿ ಹೋಮ, ಸಂಜೆ ಲಲಿತಾ ಹೋಮ ಪೂರ್ವಾಂಗ, ಲಕ್ಷಾರ್ಚನೆ, ಅ.3. ಲಲಿತಾ ಹೋಮ, ಅ.4 ಸುಬ್ರಹ್ಮಣ್ಯ ಹೋಮ, ಅ.5 ಗಾಯತ್ರಿ ಹೋಮ, 6 ದುರ್ಗಾ ಹೋಮ, 7 ನವ ಚಂಡಿಕಾ ಹೋಮ, 8ರಂದು ಧನ್ವಂತರೀ ಹೋಮ ನೆರವೇರಿಸಲಾಗುವುದು ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ.(ಕೆ.ಎಂ.ಆರ್)