ಮೈಸೂರು

ಬೆಳ್ಳಿ ಬಾಗಿಲು ಸಮರ್ಪಣೆ

ಶಿವರಾತ್ರಿ ಹಬ್ಬದ ಪ್ರಯುಕ್ತ ನಂಜನಗೂಡಿನ  ನಂಜುಂಡೇಶ್ವರ ಪಕ್ಕದಲ್ಲಿರುವ ಪಾರ್ವತಿದೇವಿಯ ಗರ್ಭಗುಡಿಗೆ ಹೊಸದಾದ ಬೆಳ್ಳಿಯ ಬಾಗಿಲನ್ನು ಅಳವಡಿಸಲಾಗಿದೆ.
ಬೆಂಗಳೂರಿನ ಉದ್ಯಮಿಗಳಾದ ಅಜಯ್ ಕುಮಾರ್ ರೆಡ್ಡಿ ದಂಪತಿಗಳು  ಈ ಬಾಗಿಲನ್ನು  ನಂಜನಗೂಡಿನ ನಂಜುಂಡೇಶ್ವರನ ದೇಗುಲಕ್ಕೆ ಸಮರ್ಪಿಸಿದ್ದಾರೆ. ಅನೇಕ ವರ್ಷಗಳಿಂದ ಮರದ ಬಾಗಿಲಿದ್ದ ಶ್ರೀಕಂಠೇಶ್ವರನ ದೇವಾಲಯದ ಪಾರ್ವತಿ ದೇವಿಯ ಗರ್ಭಗುಡಿಯ ದ್ವಾರಕ್ಕೆ ಸುಮಾರು 15 ಲಕ್ಷ ರೂ ವೆಚ್ಚದಲ್ಲಿ, 31ಕೆ.ಜಿ ತೂಕದ ಬೆಳ್ಳಿಯ ಬಾಗಿಲನ್ನ ಕಾಣಿಕೆಯಾಗಿ ನೀಡಿದ್ದಾರೆ. ಸದ್ಯ ಬೆಳ್ಳಿದ್ವಾರದ ಕೆಲಸವು ಮುಗಿದಿದ್ದು,  ವಿಶೇಷ ಪೂಜೆ ಕೂಡ ಮಾಡಲಾಗಿದೆ. ಮಾತ್ರವಲ್ಲ ಪೂರ್ಣ ಹೋಮ-ಹವನಗಳನ್ನು ಮಾಡುವ ಮೂಲಕ ಪಾರ್ವತಿಯ ಗರ್ಭಗುಡಿಗೆ ಬಾಗಿಲನ್ನು ಪ್ರತಿಷ್ಠಾಪನೆ ಮಾಡಲಾಗಿದೆ

Leave a Reply

comments

Related Articles

error: