ಮೈಸೂರು

ದಿನಸಿ ಅಂಗಡಿಯಲ್ಲಿ ಅಕ್ರಮವಾಗಿ ವೈನ್‌ ಮಾರಾಟ : ವ್ಯಕ್ತಿಯ ಬಂಧನ

ಮೈಸೂರು,ಸೆ.26:- ಹುಣಸೂರು-ಮೈಸೂರು ಹೆದ್ದಾರಿ ಬದಿ ದಿನಸಿ ಅಂಗಡಿಯಲ್ಲಿ ಅಕ್ರಮವಾಗಿ ವೈನ್‌ ಮಾರಾಟ ಮಾಡುತ್ತಿದ್ದುದನ್ನು ಪತ್ತೆ ಹಚ್ಚಿರುವ ಅಬಕಾರಿ ಅಧಿಕಾರಿಗಳು, ತಾಲೂಕಿನ ಎಮ್ಮೆಕೊಪ್ಪಲು ಗೇಟ್‌ನಲ್ಲಿ ವ್ಯಕ್ತಿಯೋರ್ವನನ್ನು ಬಂಧಿಸಿದ್ದಾರೆ.

ಬಂಧಿತನನ್ನು ಪಿರಿಯಾಪಟ್ಟಣ ತಾಲೂಕಿನ ಕಂಪಲಾಪುರದ ಸಣ್ಣಯ್ಯರ ಪುತ್ರ ಅಶೋಕ್‌  ಎಂದು ಗುರುತಿಸಲಾಗಿದೆ. ಈತ ಮೈಸೂರು ರಸ್ತೆಯ ಎಮ್ಮೆಕೊಪ್ಪಲು ಗೇಟ್‌ ಬಳಿ ಹೆದ್ದಾರಿ ಬದಿಯಲ್ಲೇ ಅಕ್ರಮವಾಗಿ ನಿರ್ಮಿಸಿಕೊಂಡಿರುವ ದಿನಸಿ ಅಂಗಡಿಯಲ್ಲಿ 25.5 ಲೀಟರ್‌ನಷ್ಟು ವಿವಿಧ ಬ್ರಾಂಡ್‌ನ ಹೋಂ ಮೇಡ್‌ ವೈನನ್ನು ತುಂಬಿದ ಬಾಟಲ್‌ಗಳಲ್ಲಿ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಚುನಾವಣಾ ಸಂಬಂಧ ಗಸ್ತು ತಿರುಗುತ್ತಿದ್ದ ವೇಳೆ   ಅಬಕಾರಿ ಉಪ ಆಯುಕ್ತ ಕೆ.ಎಸ್‌.ಮುರುಳಿ, ಡಿವೈಎಸ್‌ಪಿ ಗಂಗಾಧರ ಮುದ್ದಣ್ಣನವರ್‌ ಮಾರ್ಗದರ್ಶನದಲ್ಲಿ ಅಬಕಾರಿ ನಿರೀಕ್ಷಕ ಧರ್ಮರಾಜ್‌ ನೇತೃತ್ವದ ತಂಡ ದಾಳಿ ನಡೆಸಿ, ಸಂಗ್ರಹಿಸಿಟ್ಟಿದ್ದ ವೈನ್‌ ಬಾಟಲಿಗಳನ್ನು ವಶಕ್ಕೆ ಪಡೆದು ಆರೋಪಿಯನ್ನು ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ.

ಕಾರ್ಯಾಚರಣೆಯಲ್ಲಿ ಅಬಕಾರಿ ಉಪ ನಿರೀಕ್ಷಕಿ ಮಾನಸ, ಅಬಕಾರಿ ರಕ್ಷಕರಾದ ಮಂಜುನಾಥ್‌, ಶ್ರೀಧರ್‌, ಸಿಬ್ಬಂದಿ ಮೋಹನ್‌ ಮತ್ತಿತರರು ಪಾಲ್ಗೊಂಡಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: