ಪ್ರಮುಖ ಸುದ್ದಿಮೈಸೂರು

ಎನ್‍ರಂಗರಾವ್ & ಸನ್ಸ್ ಪ್ರೈ. ಲಿ.ಗೆ ಉತ್ಕೃಷ್ಟತಾ ಪ್ರಶಸ್ತಿ ಪ್ರದಾನಿಸಿದ ಸಿಎಂ ಬಿ.ಎಸ್.ಯಡಿಯೂರಪ್ಪ

ಮೈಸೂರು, ಸೆ,26:-  ಸುಸ್ಥಿರ ಅಭಿವೃದ್ಧಿಯನ್ನುತನ್ನ ಮುಖ್ಯಧ್ಯೇಯವಾಗಿಟ್ಟುಕೊಂಡಿರುವ ಮೈಸೂರಿನ ಎನ್‍ ರಂಗರಾವ್& ಸನ್ಸ್ ಪ್ರೈ. ಲಿಮಿಟೆಡ್ ಈ ಬಾರಿಯ ಪ್ಲಾಟಿನಂ ವಿಭಾಗದರಫ್ತುಉತ್ಕೃಷ್ಟತಾ ಪ್ರಶಸ್ತಿಗೆ (State Export Excellence Award 2016-2107) ಪ್ರಶಸ್ತಿಗೆ ಭಾಜನವಾಗಿದೆ. ಸಣ್ಣ ಮತ್ತು ಮಧ್ಯಮಕೈಗಾರಿಕಾ ವಲಯದ ರಫ್ತು ಶ್ರೇಷ್ಠತೆ ಮತ್ತು ಉತ್ಪಾದನಾ ಉತ್ಕೃಷ್ಟತೆಗಾಗಿ ಕರ್ನಾಟಕ ಸರ್ಕಾರ ಈ ಪ್ರಶಸ್ತಿಯನ್ನು ನೀಡುತ್ತದೆ.

ಮೈಸೂರು ಜಿಲ್ಲಾ ಕೈಗಾರಿಕಾ ಕೇಂದ್ರ (ಡಿಐಸಿ)ದ ಸದಸ್ಯ ಸಂಸ್ಥೆಯಾಗಿರುವ ಮೈಸೂರು ಮೂಲದ ಎನ್.ಆರ್. ಸಮೂಹವು ಇತರ ಕೆಲವು ಕೈಗಾರಿಕೆಗಳ ಜೊತೆಗೆ ಈ ಉತ್ಕೃಷ್ಟತಾ ಪ್ರಶಸ್ತಿಗೆ ನಾಮ ನಿರ್ದೇಶನಗೊಂಡಿದೆ. ವಿಧಾನಸೌಧದಲ್ಲಿ ಕರ್ನಾಟಕದ   ಮುಖ್ಯಮಂತ್ರಿಗಳಾದ   ಬಿ.ಎಸ್. ಯಡಿಯೂರಪ್ಪ ಅವರಿಂದ ನ್. ರಂಗರಾವ್& ಸನ್ಸ್ ಪ್ರೈವೇಟ್ ಲಿಮಿಟೆಡ್‍ನ ರಾಷ್ಟ್ರೀಯ ಮಾರಾಟ ವ್ಯವಸ್ಥಾಪಕ   ದ್ವಾರಕನಾಥ್‍ ಪ್ರಶಸ್ತಿ ಸ್ವೀಕರಿಸಿದರು.

ಈ ಸಂದರ್ಭ ಕೇಂದ್ರ ಸಚಿವ ಸದಾನಂದ ಗೌಡ, ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಮತ್ತಿತರರು ಉಪಸ್ಥಿತರಿದ್ದರು.

ಈ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡ ಎನ್.ರಂಗರಾವ್& ಸನ್ಸ್ ಪ್ರೈ.ಲಿ.ನ ಪಾಲುದಾರ   ಅರ್ಜುನ್‍ರಂಗ, `ಕರ್ನಾಟಕ ಸರ್ಕಾರದಿಂದ ನೀಡಲಾಗುವ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಪಡೆದಿದ್ದಕ್ಕೆ ನಮಗೆ ಅತೀವ ಸಂತಸವಾಗಿದೆ.  ಎನ್.ಆರ್. ಸಮೂಹದಲ್ಲಿ ಕೆಲಸ ಮಾಡುವ ಪ್ರತಿಯೊಬ್ಬ ಕೆಲಸಗಾರರನ್ನು ಈ ಸಂದರ್ಭದಲ್ಲಿ ಅಭಿನಂದಿಸುತ್ತೇನೆ. ಅವರ ಪರಿಶ್ರಮವಿಲ್ಲದೆ ಇದೆಲ್ಲಾ ಸಾಧ್ಯವಾಗುತ್ತಿರಲಿಲ್ಲ. ನಮ್ಮ ಪ್ರಯತ್ನ ಮತ್ತು ಶ್ರಮವನ್ನು ಗುರುತಿಸಿ ಈ ಪ್ರತಿಷ್ಠಿತ ಗೌರವಕ್ಕೆ ನಮ್ಮ ಸಂಸ್ಥೆಯನ್ನು ಆಯ್ಕೆ ಮಾಡಿದ್ದಕ್ಕಾಗಿ ಆಯ್ಕೆ ಸಮಿತಿಯ ತೀರ್ಪುಗಾರರಿಗೆ ನಾವು ನಮ್ಮ ಕೃತಜ್ಞತೆಯನ್ನು ಸಲ್ಲಿಸುತ್ತೇವೆ’ ಎಂದರು.

ಮೈಸೂರು ಮೂಲದಎನ್.ಆರ್. ಸಮೂಹದ ಭಾಗವಾಗಿರುವ ಸೈಕಲ್ ಪ್ಯೂರ್‍ ಅಗರ ಬತ್ತೀಸ್ ಭಾರತದ  ಪ್ರಮುಖ ಧೂಪ ದ್ರವ್ಯ ಮಾರುಕಟ್ಟೆಯ ಪ್ರವರ್ತಕ ಬ್ರಾಂಡ್‍ಆಗಿದ್ದು, ಸುಮಾರು 70ಕ್ಕೂ ಅಧಿಕ ದೇಶಗಳಿಗೆ ಅದು ತನ್ನ ಗುಣಮಟ್ಟದ ಉತ್ಪನ್ನಗಳನ್ನು ರಫ್ತು ಮಾಡುತ್ತದೆ.

ರಫ್ತು ವಲಯದಲ್ಲಿ ಸಂಸ್ಥೆಯ ಅತ್ಯುತ್ತಮ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಯಿತು. ವಿವಿಧ ರಫ್ತು ವಿಭಾಗಗಳಲ್ಲಿನ ಅತ್ಯುತ್ತಮ ಸಾಧನೆಗಾಗಿ ತನ್ನ ಸದಸ್ಯ ರಫ್ತುದಾರರನ್ನು ಗುರುತಿಸಿ ರಾಜ್ಯ ಸರ್ಕಾರವು ಈ ಪ್ರಶಸ್ತಿಯನ್ನು ಮಾಡುತ್ತ ಬಂದಿದೆ. (ಎಸ್.ಎಚ್)

Leave a Reply

comments

Related Articles

error: