ಮೈಸೂರು

ರಿಂಗ್ ರೋಡ್ ರಸ್ತೆಯಲ್ಲಿ ಗುಂಡಿ : ಗುಂಡಿಯಲ್ಲಿ ಬಿದ್ದು ಕೈಕಾಲು ಮುರಿದುಕೊಳ್ಳುತ್ತಿರುವ ಬೈಕ್ ಸವಾರರು; ದುರಸ್ತಿ ಯಾವಾಗ?

ಮೈಸೂರು,ಸೆ.26:- ಟಿ.ನರಸೀಪುರ ರಿಂಗ್ ರೋಡ್ ಸರ್ಕಲ್ ನಿಂದ ಶ್ರೀನಿವಾಸನ್ ಐಪಿಎಸ್ ನಗರಕ್ಕೆ ಹೋಗುವ ರಸ್ತೆಯಲ್ಲಿ ಗುಂಡಿ ಬಿದ್ದಿದ್ದು, ದ್ವಿಚಕ್ರವಾಹನ ಸವಾರರು ಬಿದ್ದು ಕೈಕಾಲು ಮುರಿದುಕೊಂಡ ಘಟನೆ ನಡೆದಿದೆ.

ರಿಂಗ್ ರೋಡ್ ನಲ್ಲಿ ಎರಡು ಅಡಿ ಆಳದ ವರೆಗೆ ಗುಂಡಿ ಬಿದ್ದಿದ್ದು, ನಿನ್ನೆ ಒಂದೇ ದಿನ 20 ಕ್ಕೂ ಹೆಚ್ಚು ಬೈಕ್ ಸವಾರರು ಈ ಗುಂಡಿಯಲ್ಲಿ ಬಿದ್ದು ಕೈ ಕಾಲು ಮುರಿದುಕೊಂಡಿದ್ದಾರೆ. ಕೆಲವರಿಗೆ ತಲೆಗೆ ಪೆಟ್ಟಾಗಿದೆ. ಕಳೆದ ಒಂದು ವಾರದಿಂದಲೂ ಈ ಗುಂಡಿಗಳು ಹಾಗೇ ಇದೆ. ಇನ್ನೂ ಈ ರಸ್ತೆಯಲ್ಲಿ ಇನ್ನೆಷ್ಟು ಜನರು ಈ ರಸ್ತೆ ಗುಂಡಿಯಲ್ಲಿ ಬಿದ್ದು ಕೈ ಕಾಲು ಮುರಿದುಕೊಳ್ಳ ಬೇಕೋ ಗೊತ್ತಿಲ್ಲ.  ಗುಂಡಿ ಬಿದ್ದು ಬಹಳ ದಿನವಾದರೂ ಸಂಬಂಧಪಟ್ಟವರಾರು ಈ ಗುಂಡಿಯನ್ನು ಮುಚ್ಚುವ ಮಹತ್ಕಾರ್ಯಕ್ಕೆ ಹೋಗಿಲ್ಲ. ಇಲ್ಲಿ ಇನ್ನೆಷ್ಟು ಅವಘಡಗಳು ನಡೆಯಬೇಕೋ ಎಂದು ವಾಹನ ಸವಾರರು, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: