ಮೈಸೂರು

ಮಾವುತರ ಮಕ್ಕಳಿಗೆ-ಪೋಷಕರಿಗೆ ಬಾಲ್ಯ ವಿವಾಹ ನಿಷೇಧ ಕಾಯ್ದೆ ಕುರಿತು ಅರಿವು

ಮೈಸೂರು,ಸೆ.26:- ಮೈಸೂರು ದಸರಾ ಮಹೋತ್ಸವದ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುವ ಆನೆಗಳ ದಸರಾ ಮಾವುತರ ಮಕ್ಕಳಿಗೆ-ಪೋಷಕರಿಗೆ ಬಾಲ್ಯ ವಿವಾಹ ನಿಷೇಧ ಕಾಯ್ದೆ ಕುರಿತು ಅರಿವು ಮೂಡಿಸಲಾಯಿತು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ  ಅರಮನೆ ಆವರಣದಲ್ಲಿ ಇರುವ ಟೆಂಟ್ ಶಾಲೆಯ ಮಕ್ಕಳಿಗೆ ಇಂದು ಹಮ್ಮಿಕೊಳ್ಳಲಾದ ಅರಿವು ಕಾರ್ಯಕ್ರಮದಲ್ಲಿ  ಮಹಿಳಾ ಮತ್ತು ಮಕ್ಕಳ ಇಲಾಖೆ ಉಪ ನಿರ್ದೇಶಕಿ ಪದ್ಮ  ಅರಿವು ಮೂಡಿಸಿದರು. ಮಕ್ಕಳಿಗೆ ಮದುವೆ ಕುರಿತು ಅರಿವು‌  ಮೂಡಿಸಿ ಯಾವ ವಯಸ್ಸಿನಲ್ಲಿ ಮದುವೆ ಆಗಬೇಕು ಎಂಬುದರ ಬಗ್ಗೆ ಮಾಹಿತಿ ನೀಡಿದರು. ಮಕ್ಕಳ ತಾಯಂದಿರಿಗೂ ಅರಿವು ಮೂಡಿಸಿದರು. ಬೇಗ ಮದುವೆ ಆದರೆ ಅದರಿಂದ ಆಗುವ ಅನಾಹುತಗಳ ಬಗ್ಗೆ ಮಕ್ಕಳ ಪೋಷಕರಿಗೆ ತಿಳುವಳಿಕೆ ಹೇಳಿದರು. ಕಾರ್ಯಕ್ರಮದಲ್ಲಿ ಇಲಾಖೆಯ ಅಧಿಕಾರಿಗಳು, ಮಾವುತರ ಮಕ್ಕಳು, ಮಕ್ಕಳ ಪೋಷಕರು ಭಾಗಿಯಾಗಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: