ಪ್ರಮುಖ ಸುದ್ದಿ

ಸಚಿವ ಕೆ.ಎಸ್ ಈಶ್ವರಪ್ಪ ಅವರ ಮಗಳ ಕಳೆದು ಹೋದ  ಮೊಬೈಲ್ ಬಾಗಲಕೋಟೆಯ ಬಿಜೆಪಿ ಕಾರ್ಯಕರ್ತನ ಮನೆಯಲ್ಲಿ ಪತ್ತೆ

ರಾಜ್ಯ(ಬಾಗಲಕೋಟ)ಸೆ.26:-   ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ ಅವರ ಮಗಳ ಕಳೆದು ಹೋದ  ಮೊಬೈಲ್ ಬಾಗಲಕೋಟೆಯ ಬಿಜೆಪಿ ಕಾರ್ಯಕರ್ತರೊಬ್ಬರ ಮನೆಯಲ್ಲಿ ಪತ್ತೆಯಾಗಿದೆ.

ಈಶ್ವರಪ್ಪ ಅವರ ಮಗಳು ಕೆ ಶಾಂತಾ ಬೆಂಗಳೂರು ನಾರ್ತ್ ಈಸ್ಟ್ ಪೊಲೀಸ್ ಠಾಣೆಯಲ್ಲಿ ನನ್ನ ಮೊಬೈಲ್ ಕಳೆದು ಹೋಗಿದೆ ಎಂದು ದೂರು ನೀಡಿದ್ದರು. ಈ ಮೊಬೈಲ್ ಈಗ ಬಿಜೆಪಿ ಕಾರ್ಯಕರ್ತ ಲಕ್ಷ್ಮಣ ಬಂಡಿವಡ್ಡರ್ ಮನೆಯಲ್ಲಿ ಪತ್ತೆಯಾಗಿದೆ.

ಈಶ್ವರಪ್ಪ ಅವರ ಬೆಂಗಳೂರು ಗಾಂಧಿಭವನದ 41 ನಂ ನಿವಾಸದಿಂದ ಸೆಪ್ಟೆಂಬರ್ 13 ರಂದು ಅವರ ಪುತ್ರಿ ಕೆ ಶಾಂತಾರ ಮೊಬೈಲ್ ಕಳುವಾಗಿತ್ತು. ಇದನ್ನು ಹುಡುಕಿಕೊಡಿ ಎಂದು ಕೆ ಶಾಂತಾ ಪೊಲೀಸರಿಗೆ ದೂರು ನೀಡಿದ್ದರು. ಶಾಂತಾ ಅವರ ಮೊಬೈಲ್ ನ್ನು ಟ್ರ್ಯಾಕ್ ಮಾಡಿದ ಪೊಲೀಸರಿಗೆ ಬಾಗಲಕೋಟೆಯ ಬಂಟನೂರು ಗ್ರಾಮದಲ್ಲಿ ಇದೆ ಎಂಬುದು ತಿಳಿದು ಬಂದಿತ್ತು.

ಬೆಂಗಳೂರು ನಾರ್ತ್ ಈಸ್ಟ್ ಪೊಲೀಸರು ಲೋಕಾಪುರ ಪೊಲೀಸರಿಗೆ ಈ ಮಾಹಿತಿಯನ್ನು ನೀಡಿದ್ದರು. ಮಾಹಿತಿ ಮೇರೆಗೆ ಆ ಗ್ರಾಮಕ್ಕೆ ಹೋದ ಅವರು ಲಕ್ಷ್ಮಣ ಬಂಡಿವಡ್ಡರ್ ಮನೆಯಿಂದ ಮೊಬೈಲ್ ಅನ್ನು ವಶಕ್ಕೆ ಪಡೆದು ಬೆಂಗಳೂರಿಗೆ ಕಳುಹಿಸಿಕೊಟ್ಟಿದ್ದಾರೆ.  ಆದರೆ ಆ ಮೊಬೈಲ್ ಹೇಗೆ ಕಾರ್ಯಕರ್ತನ ಮನೆಗೆ ಹೋಯಿತು ಎಂಬ ಪ್ರಶ್ನೆ ಹುಟ್ಟಿಕೊಂಡಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: