ಮೈಸೂರು

10 ಲಕ್ಷ ರೂ. ವೆಚ್ಚದ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ

ಮೈಸೂರು,ಸೆ.26:- ನಂಜನಗೂಡು ನಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ನೆಸ್ಟ್ಲೆ ಕಂಪನಿ ವತಿಯಿಂದ 10 ಲಕ್ಷ ರೂ.ವೆಚ್ಚದ ಶುದ್ಧ ಕುಡಿಯುವ ನೀರಿನ ಘಟಕವನ್ನು ನೆಸ್ಟ್ಲೆ ಕಂಪನಿ ಮುಖ್ಯಸ್ಥ ಟ್ರೈ ಗ್ರೀನ್ ಉದ್ಘಾಟಿಸಿದರು

ನಂತರ ಮಾತನಾಡಿದ ಅವರು ಆಸ್ಪತ್ರೆಗಳಿಗೆ ಬರುವವರಿಗೆ ಅನುಕೂಲ ಮಾಡಿಕೊಡಲು ಶುದ್ಧವಾದ ನೀರನ್ನು ಕುಡಿದು ರೋಗದಿಂದ ದೂರವಿರಲು ಅನುಕೂಲವಾಗುತ್ತದೆ. ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಬರುವವರು ಶುದ್ಧ ನೀರನ್ನು ವೇಸ್ಟ್ ಮಾಡದೆ ಉಪಯೋಗಿಸಬೇಕು. ಹನಿ ಹನಿ ನೀರಿಗೂ ತುಂಬಾ ಬೆಲೆ ಇದೆ. ಆದ್ದರಿಂದ ಈ ಘಟಕವನ್ನು ಬಹಳ ಸಂತೋಷದಿಂದ ನಮ್ಮ ಕಂಪನಿ ಸ್ಥಾಪಿಸಿದೆ. ಜೊತೆಗೆ ಮೂರು ವರ್ಷಗಳ ಕಾಲ ನೀರಿನ ಘಟಕದ ಆಗು ಹೋಗುಗಳನ್ನು ನಾವೇ ನೋಡಿಕೊಳ್ಳುತ್ತೇವೆ ಎಂದರು

ಈ ಸಂದರ್ಭದಲ್ಲಿ ಆಸ್ಪತ್ರೆಯ ವೈದ್ಯರು ಮತ್ತು ಅಧಿಕಾರಿಯಾದ ಕಲಾವತಿ ಮತ್ತು ಸಿಬ್ಬಂದಿ ವರ್ಗದವರು ಹಾಗೂ ಇತರರು ಇದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: