ಪ್ರಮುಖ ಸುದ್ದಿಮೈಸೂರು

ಆಹಾರ ಮೇಳದಲ್ಲಿ : ಬಾಯಲ್ಲಿ ನೀರೂರಿಸುವ ಬೊಂಬು ಬಿರಿಯಾನಿ-ಬಿದರಕ್ಕಿ ಪಾಯಸ

ಮೈಸೂರು,ಸೆ.26 : ನಾಡ ಹಬ್ಬ ಮೈಸೂರು ದಸರಾ ಅಂಗವಾಗಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ ಮೈದಾನದಲ್ಲಿ ಆಯೋಜಿಸಿರುವ ಆಹಾರ ಮೇಳದಲ್ಲಿ ಆದಿವಾಸಿಗಳ ಪಾರಂಪರಿಕ ಬುಡಕಟ್ಟು ಆಹಾರ ಪದ್ಧತಿಗಳ ಜನಪ್ರಿಯ ಖಾಧ್ಯಗಳನ್ನು ಉಣಬಡಿಸಲಾಗುವುದು ಎಂದು ಕರ್ನಾಟಕ ಆದಿವಾಸಿ ರಕ್ಷಣಾ ಪರಿಷತ್ ರಾಜ್ಯಾಧ್ಯಕ್ಷ ಎಂ ಕೃಷ್ಣಯ್ಯ ಅವರು ತಿಳಿಸಿದರು.

ಗುರುವಾರ ಪತ್ರಕರ್ತರ ಸಂಘದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, 2014 ರಿಂದಲೂ ನೈಸರ್ಗಿಕವಾದ ಆದಿವಾಸಿಗಳ ಪಾರಂಪರಿಕ ಉತ್ತಮ ಗುಣಮಟ್ಟದ  ಬುಡಕಟ್ಟುಗಳ ಆಹಾರಗಳನ್ನು ನಾಗರಿಕ ಸಮಾಜಕ್ಕೆ  ನೀಡುತ್ತಾ ಬಂದಿದ್ದು, ಈ ಬಾರಿಯೂ ಸೌಟ್ಸ್ ಮತ್ತು ಗೈಡ್ಸ್ ಮೈದಾನದ ಆಲದ ಮರದ ಕೆಳಗಡೆ ಪ್ರಕೃತಿ ಪರಿಸರದ ವಾತಾವರಣದಲ್ಲಿ ಬುಡಕಟ್ಟು ಶೈಲಿಯಲ್ಲಿ ನಿರ್ಮಾಣಗೊಂಡಿರುವ  “ಹಾಡಿ ಮನೆ ಊಟ ” ಎಂಬ ಕುಟೀರದಲ್ಲಿ   ಬೊಂಬು ಬಿರಿಯಾನಿ,ಬಿದರಕ್ಕಿ ಪಾಯಸ, , ಜೇನುತುಪ್ಪ ಮಿಶ್ರಿತ ಕಾಡುಗೆಣಸು , ಬಿದಿರುಕಟ್ಟೆಪಲ್ಯ , ಮಾಕಳಿ  ಬೇರಿನ ಟೀ , ಕಾಡುಬಾಳೆಹಣ್ಣು , ಏಡಿ ಸಾರು ಮತ್ತು ರಾಗಿಮುದ್ದೆ ಮುಂತಾದ ಆಹಾರ ಪದಾರ್ಥಗಳು ಲಭ್ಯವಿರಲಿವೆ ಎಂದರು.

ಇದು ರಾಷ್ಟ್ರೀಯ ಮತ್ತು ಅಂತರ ರಾಷ್ಟ್ರೀಯ ಮಟ್ಟದಲ್ಲಿ ಜನಪ್ರಿಯವಾದಂತ ಆಹಾರವಾಗಿದ್ದು, ಕಾಡು ಕೊತ್ತಂಬರಿ, ಹರಿಸಿನ, ಶುಂಠಿ, ಕರಿಬೇವು ಅನ್ನು ಬಳಸಿ ವಿಶಿಷ್ಠವಾಗಿ ಆಹಾರ ತಯಾರಿಸಲಿದ್ದು, ಸುಮಾರು 30ಜನರ ಬಾಣಸಿಗರು ಕಾರ್ಯನಿರ್ವಹಿಸಲಿದ್ದು, ಆಹಾರ ಸವಿದು ಆದಿವಾಸಿಗಳಿಗೆ ಉತ್ತೇಜನ ನೀಡಿ, ಇದರೊಂದಿಗೆ ಗಿಡ ಮೂಲಿಕೆ ಔಷಧಿಯು ಲಭ್ಯವಿರಲಿದೆ ಎಂದು ಹೇಳಿದರು.

ಸುದ್ದಿಗೋಷ್ಟಿಯಲ್ಲಿ ಪರಿಷತ್ತಿನ ರಾಜ್ಯ ಪ್ರಧಾನ ಕಾರ್ಯದರ್ಶಿ  ಬಿ ಕಾವೇರ, ರಾಜ್ಯ ಜಂಟಿ ಕಾರ್ಯದರ್ಶಿ ಸಾವಿತ್ರಮ್ಮ, ರಾಮ್ , ಕುಮಾರ ಉಪಸ್ಥಿತರಿದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: