ಸುದ್ದಿ ಸಂಕ್ಷಿಪ್ತ

ಸೆ.30ರಂದು ದೇವಿಸ್ತೂತಿ ಭಜನಾ ಸ್ಪರ್ಧೆ

ಮೈಸೂರು,ಸೆ.26 : ಜನನಿ ಸೇವಾ ಟ್ರಸ್ಟ್ ವತಿಯಿಂದ ನಾಡ ಹಬ್ಬ ದಸರಾ ಅಂಗವಾಗಿ ಶಿವರಾಮಪೇಟೆಯ ರಾಮಮಂದಿರದಲ್ಲಿ ದೇವಿಸ್ತೂತಿ ಭಜನಾ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ.

ಸೆ.30ರ ಬೆಳಗ್ಗೆ 11 ಗಂಟೆಯಿಂದ ನಡೆಯುವ ಸ್ಪರ್ಧೆಯಲ್ಲಿ ಪ್ರತಿ ತಂಡದಿಂದ 6 ರಿಂದ 8ರವರಿಗೆ ಅವಕಾಶ, 5 ನಿಮಿಷಗಳ ಕಾಲಾವಕಾಶ, ಹಾಡನ್ನು ನೋಡಿಕೊಳ್ಳದೇ ಹಾಡಬೇಕು. ಹೆಸರು ನೊಂದಾಯಿಸಿಕೊಳ್ಳಲು ಮೊ.ಸಂ. 9141537959, 9538992537 ಅನ್ನು ಸಂಪರ್ಕಿಸಬಹುದಾಗಿದ್ದು ಸ್ಥಳದಲ್ಲಿಯೇ ನೋಂದಾವಣಿ ನಡೆಯಲಿದೆ ಎಂದು ಕಾರ್ಯದರ್ಶಿ ಆರ್.ಸೌಮ್ಯ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: