ಮೈಸೂರು

ಜನನಿ ಸೇವಾ ಟ್ರಸ್ಟ್ : ದಸರಾ ಅತಿಥಿಗಳ ಸ್ವಾಗತ.28.

ಮೈಸೂರು,ಸೆ.26 : ನಾಡ ಹಬ್ಬ ದಸರಾ ಮಹೋತ್ಸವವದ ಸಂದರ್ಭದಲ್ಲಿ ಅರಮನೆಗೆ ಆಗಮಿಸುವ ದೇಶ-ವಿದೇಶಿ ಪ್ರವಾಸಿಗರಿಗೆ ಗುಲಾಬಿ ಹೂ ಮೈಸೂರು ಪೇಟಾ ತೊಡಿಸಿ, ನಂಜನಗೂಡಿನರಸಬಾಳೆ, ಮೈಸೂರು ಪಾಕ್, ಮಲ್ಲಿಗೆ, ಚಿಗುರು ವೀಳ್ಯಾದೆಲೆ ನೀಡುವ ಕಾರ್ಯಕ್ರಮವನ್ನು  ಜನನಿ ಸೇವಾ ಟ್ರಸ್ಟ್ ನಿಂದ ಆಯೋಜಿಸಲಾಗಿದೆ.

ಸೆ.28ರ ಬೆಳಗ್ಗೆ 11 ಗಂಟೆಯಿಂದ ಅರಮನೆಯ ವರಹ ದ್ವಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಉದ್ಘಾಟಿಸುವರು, ಮೇಯರ್ ಪುಷ್ಪಲತಾ ಜಗನ್ನಾಥ್, ಜಿ.ಪಂ. ಅಧ್ಯಕ್ಷೆ ಪರಿಮಳ ಶ್ಯಾಂ ಇವರುಗಳು ಪ್ರವಾಸಿಗರನ್ನು ಸ್ವಾಗತಿಸುವರು. ಅರಮನೆ ಮಂಡಳಿ ಉಪ ನಿರ್ದೇಶಕ ಟಿ.ಎಸ್.ಸುಬ್ರಹ್ಮಣ್ಯ, ಮೈಸೂರು ಮಹಿಳಾ ಒಕ್ಕೂಟದ ಅಧ್ಯಕ್ಷೆ ವಿಜಯಲಕ್ಷ್ಮಿ ನರೇಂದ್ರನ್, ಆರ್. ಗೌತಮ್ ಸಲೇಚ ಮುಖ್ಯ ಅತಿಥಿಯಾಗಿರುಲಿದ್ದು, ಪಾಲಿಕೆ ಮಾಜಿ ಸದಸ್ಯ ಡಾ.ಎಂ.ಕೆ.ಅಶೋಕ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಲಿದೆ. (ಕೆ.ಎಂ.ಆರ್)

Leave a Reply

comments

Related Articles

error: