ಮೈಸೂರು

ಗೋವಿಂದರಾಜು ಮೇಲೆ ದೂರು ದಾಖಲಾಗಬೇಕು : ಹೆಚ್.ವಿಶ್ವನಾಥ ಆಗ್ರಹ

ಕಾಂಗ್ರೆಸ್ ಹೈಕಮಾಂಡ್‌ಗೆ ಕಪ್ಪ ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ ಸಂಸದೀಯ ಕಾರ್ಯದರ್ಶಿ ಗೋವಿಂದರಾಜು  ಅವರ ಮೇಲೆ ದೂರು ದಾಖಲಾಗಬೇಕು ಎಂದು ಮಾಜಿ ಸಂಸದ ಹೆಚ್.ವಿಶ್ವನಾಥ್ ಆಗ್ರಹಿಸಿದ್ದಾರೆ.
ಮೈಸೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಕೆಪಿಸಿಸಿ ಈ ಕೂಡಲೆ ಡೈರಿ ಪ್ರಕರಣದ ಕುರಿತು ದೂರು ನೀಡಬೇಕು.ಗೋವಿಂದರಾಜು ಚಾರಿತ್ರ್ಯ ಸರಿಯಿಲ್ಲ ಎಂದು ಮೊದಲೆ ಗೊತ್ತಿತ್ತು. ಆದರೂ ಅವರನ್ನು ಸಂಸದೀಯ ಕಾರ್ಯದರ್ಶಿಯನ್ನಾಗಿ ಮಾಡಿಕೊಂಡಿದ್ದಾರೆ. ಇಡೀ ಪ್ರಕರಣ ಜವಾಬ್ದಾರಿಯನ್ನು ಗೋವಿಂದರಾಜು ಹೊರಲೇಬೇಕಿದೆ.
ಪ್ರಕರಣದಲ್ಲಿ ಷಡ್ಯಂತ್ರ ನಡೆದಿದೆ ಅನ್ನೋದು ಮಾತ್ರ ಸತ್ಯವಾಗಿದ್ದು, ಷಡ್ಯಂತ್ರ ಬಿಜೆಪಿ ಹಾಗೂ ಗೊವಿಂದರಾಜು ಅವರಿಂದಲೂ ಆಗಿರಬಹುದು ಎಂದರು.
ಘಟನೆಯ ಸತ್ಯ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ರಾಜ್ಯದ ಜನರಿಗೆ ತಿಳಿಯಬೇಕಿದೆ. ಕೆಪಿಸಿಸಿ ಅಧ್ಯಕ್ಷರು ಯಾಕೇ ಇನ್ನೂ ಮೌನವಾಗಿದ್ದಾರೆ ಅಂತ ತಿಳಿಯುತ್ತಿಲ್ಲ.
ಅಥವಾ ಹೈಕಮಾಂಡ್ ನ್ನು ಬಿಗಿಹಿಡಿದಿಟ್ಟುಕೊಳ್ಳಲು ಕಪ್ಪ ನೀಡಿರಲೂಬಹುದು. ಈ ಎಲ್ಲ ಅಂಶಗಳ ಕುರಿತು ಉನ್ನತ ಮಟ್ಟದ ತನಿಖೆಯಾಗಬೇಕು ಎಂದು ಆಗ್ರಹಿಸಿದರು.
ಯಾವ ಕ್ಷೇತ್ರದಲ್ಲೂ ಈಗ ಪಾವಿತ್ರ್ಯತೆ ಉಳಿದುಕೊಂಡಿಲ್ಲ. ಇಡೀ ಇಲಾಖೆ ಅಷ್ಟೇ ಅಲ್ಲ ರಾಜಕೀಯ ಸೇರಿದಂತೆ ಯಾವ ಕ್ಷೇತ್ರದಲ್ಲೂ ಪಾವಿತ್ರ್ಯತೆ ಉಳಿದಿಲ್ಲ.ಪಾವಿತ್ರ್ಯತೆ ಅನ್ನೋ ಪದವೇ ಅಪವಿತ್ರವಾಗಿ ಹೋಗಿದೆ. ಡೈರಿ ದಾಖಲೆ ಹೇಗೆ ಹೊರಗೆ ಬಂತು ಅನ್ನೋ ವಿಷಯವೂ  ತನಿಖೆ ಆಗಬೇಕಿದೆ. ರಾಜಕೀಯ ಪಕ್ಷಗಳಿಗೆ ದೇಣಿಗೆ ಕೊಡೋದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ.  ಆದರೆ ಈಗಿನ ಡೈರಿ ವಿಷಯ  ಜನರನ್ನು ದಾರಿ ತಪ್ವಪಿಸುವ ಕೆಲಸ ಎಂದಿದ್ದಾರೆ.

Leave a Reply

comments

Related Articles

error: