ಮೈಸೂರು

ತ್ರಿನೇಶ್ವರ ದೇವಾಲಯದಲ್ಲಿ ರಾಜಮಾತೆಯಿಂದ ವಿಶೇಷ ಪೂಜೆ : ಜನರ ಒಳಿತಿಗಾಗಿ ಪ್ರಾರ್ಥನೆ

ಮೈಸೂರಿನಲ್ಲಿ ಶಿವರಾತ್ರಿಯ ಪ್ರಯುಕ್ತ ಅರಮನೆ ಆವರಣದ ತ್ರಿನೇಶ್ವರ ದೇವಾಲಯದಲ್ಲಿ ರಾಜಮಾತೆ ಪ್ರಮೋದಾದೇವಿಯವರಿಂದ  ವಿಶೇಷ ಪೂಜೆ ನೆರವೇರಿತು.
ತ್ರಿನೇಶ್ವರ ದೇವಾಲಯದ ಶಿವಲಿಂಗಕ್ಕೆ  ವರ್ಷದಲ್ಲಿ ಒಂದೇ ಬಾರಿ  ತೊಡಿಸುವ 11 ಕೆ.ಜಿ.ಚಿನ್ನದಿಂದ ತಯಾರಿಸಲಾದ  ಚಿನ್ನದ ಕೊಳಗವನ್ನು ಮುಂಜಾನೆಯ ಶುಭಮುಹೂರ್ತದಲ್ಲಿ  ಧಾರಣೆ ಮಾಡಲಾಯಿತು. ಚಿನ್ನದ ಮುಖದಿಂದ ಕಂಗೊಳಿಸುವ ಅಪರೂಪದ ಶಿವನನ್ನು ನೋಡಲು ಭಕ್ತಸಾಗರವೇ ಹರಿದು ಬಂದಿತ್ತು.
ಭಕ್ತರು ಬೆಳಗ್ಗೆ 6 ಗಂಟೆಯಿಂದಲೇ ಸರತಿಸಾಲಿನಲ್ಲಿ ನಿಂತು ಶಿವನ ದರ್ಶನ ಪಡೆದರು. ಅರಮನೆ ದೇವಾಲಯ ಹೊರತು ಪಡಿಸಿ ಇತರಡೆಯ  ಶಿವನ ದೇವಾಲಯಳಲ್ಲೂ ವಿಶೇಷ ಪೂಜೆ ಕಾರ್ಯಕ್ರಮ.ನೆರವೇರಿತು.

ರಾಜ್ಯದಲ್ಲಿ ಎದುರಾಗಿರುವ ಭೀಕರ ಬರಗಾಲ ನಿವಾರಣೆಗಾಗಿ ಮೈಸೂರು ರಾಜಮನೆತನದ ರಾಜಮಾತೆ ಪ್ರಮೋದಾದೇವಿ ಒಡೆಯರ್ ಅವರಿಂದ ವಿಶೇಷ ಪೂಜೆ ಸಲ್ಲಿಸಿದರು.
ಬರಗಾಲ ನಿವಾರಣೆಗಾಗಿ ತ್ರಿನೇಶ್ವರ ಸ್ವಾಮಿ ದೇಗುಲದಲ್ಲಿ ಮಂಡಲ ದೀಪ ಹಚ್ಚಿದರು. ಆ ದೀಪವು ಇಂದಿನಿಂದ ನಿರಂತರವಾಗಿ 48 ದಿನಗಳ ಕಾಲ ಬೆಳಗಲಿದೆ.  ಈ ಸಂದರ್ಭ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು  ರಾಜ್ಯದ ಜನರ ಒಳಿತಿಗಾಗಿ ಇಂದಿನಿಂದ 48 ದಿನಗಳ ಕಾಲ ಮಂಡಲ ವ್ರತ ಕೈಗೊಂಡಿರುವುದಾಗಿ ತಿಳಿಸಿದರು.
ರಾಜ್ಯದಲ್ಲಿ ಎದುರಾಗಿರುವ ಭೀಕರ ಬರಗಾಲದ ಕುರಿತು ಕಳವಳ ವ್ಯಕ್ತಪಡಿಸಿದರು.

Leave a Reply

comments

Related Articles

error: