ಮೈಸೂರು

ನಂದಿಧ್ವಜದ ಮುಖ್ಯಸ್ಥರಿಗೆ ಫಲತಾಂಬೂಲ ನೀಡಿ ಆಹ್ವಾನ

ಮೈಸೂರು,ಸೆ.26:- ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ ಹಿನ್ನೆಲೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ನಂದಿಧ್ವಜದ ಮುಖ್ಯಸ್ಥರಿಗೆ ಇಂದು ಫಲತಾಂಬೂಲ ನೀಡಿ ಆಹ್ವಾನಿಸಿದರು.

ಮೈಸೂರಿನ ಗೌರಿಶಂಕರ ನಗರದ ಪಂಚಗವಿ ಮಠಕ್ಕೆ ತೆರಳಿದ ಸಚಿವ ವಿ.ಸೋಮಣ್ಣ ಮೊದಲಿಗೆ ಪಂಚಗವಿ ಮಠದಲ್ಲಿ ಪೂಜೆ ಸಲ್ಲಿಸಿದರು. ಬಳಿಕ ಮಠದ ಸ್ವಾಮೀಜಿಗಳು ಹಾಗೂ ನಂದಿಧ್ವಜದ ಮುಖ್ಯಸ್ಥರಿಗೆ ಸನ್ಮಾನ ಮಾಡಿದರು. ಸಚಿವ ಸೋಮಣ್ಣ ಹಾಗೂ ಸಂಸದ ಪ್ರತಾಪ್ ಸಿಂಹ ಅವರು  ನಂದಿಧ್ವಜದ ಮುಖ್ಯಸ್ಥರಿಗೆ ಹಾರ ಹಾಕಿ, ಶಾಲು ಹೊದಿಸಿ ಸನ್ಮಾನ ಮಾಡಿದರು.

ಇದೇ ವೇಳೆ ಸ್ವಾಮೀಜಿಗಳು ಮತ್ತು ನಂದಿಧ್ವಜದ ಮುಖ್ಯಸ್ಥರಿಗೆ ಆಹ್ವಾನ ಪತ್ರಿಕೆ ಜೊತೆಗೆ ಫಲತಾಂಬೂಲ ನೀಡಿ ದಸರಾ ಮಹೋತ್ಸವಕ್ಕೆ ಆಹ್ವಾನ ನೀಡಿದರು. ಸಚಿವ ಸೋಮಣ್ಣಗೆ ಹಲವು ಅಧಿಕಾರಿಗಳು ಸಾಥ್ ನೀಡಿದರು. (ಕೆ.ಎಸ್,ಎಸ್ .ಎಚ್)

Leave a Reply

comments

Related Articles

error: