ಕ್ರೀಡೆಮೈಸೂರು

ಮೈಸೂರು ವಿಶ್ವವಿದ್ಯಾಲಯ ಅಂತರ ಕಾಲೇಜು ಅಥ್ಲೆಟಿಕ್ಸ್ ಕೂಟ : ವಿದ್ಯಾಶ್ರಮ ಕಾಲೇಜಿಗೆ ಸಮಗ್ರ ಪ್ರಶಸ್ತಿ

 ಮೈಸೂರು,ಸೆ.27:- ಮೈಸೂರು ವಿಶ್ವವಿದ್ಯಾಲಯ ಅಂತರ ಕಾಲೇಜು ಅಥ್ಲೆಟಿಕ್ಸ್ ಕೂಟದ ಪುರುಷರ ಹಾಗೂ ಮಹಿಳೆಯರ ವಿಭಾಗದಲ್ಲಿ ಕ್ರಮವಾಗಿ ವಿದ್ಯಾಶ್ರಮ ಕಾಲೇಜು ಹಾಗೂ ಪಿಜಿಎಸ್‌ಇ ಮಾನಸ ಗಂಗೋತ್ರಿ ತಂಡಗಳು ‘ಸಮಗ್ರ’ ಪ್ರಶಸ್ತಿ ಪಡೆದಿವೆ.

ಮೈಸೂರು ವಿವಿ ದೈಹಿಕ ಶಿಕ್ಷಣ ವಿಭಾಗದಿಂದ ಓವಲ್ ಮೈದಾನದಲ್ಲಿ ನಿನ್ನೆ ಮುಕ್ತಾಯಗೊಂಡ ಕ್ರೀಡಾಕೂಟದ ಪುರುಷರ ವಿಭಾಗದಲ್ಲಿ ವಿದ್ಯಾಶ್ರಮ ಕಾಲೇಜು 89 ಅಂಕದೊಂದಿಗೆ ಈ ಸಾಧನೆ ಮಾಡಿತು. ಪಿಜಿಎಸ್‌ಇ ಮಾನಸ ಗಂಗೋತ್ರಿ ತಂಡ 69 ಅಂಕದೊಂದಿಗೆ ದ್ವಿತೀಯ, ಬಾಸುದೇವ ಸೋಮಾನಿ ಕಾಲೇಜು 59 ಅಂಕಗಳೊಂದಿಗೆ ತೃತೀಯ ಸಮಗ್ರ ಪ್ರಶಸ್ತಿ ಪಡೆದುಕೊಂಡಿವೆ.

ಮಹಿಳೆಯರ ವಿಭಾಗದಲ್ಲಿ 99 ಅಂಕ ಪಡೆದ ಪಿಜಿಎಸ್‌ಇ ಮಾನಸಗಂಗೋತ್ರಿ ಪ್ರಥಮ, 77 ಅಂಕ ಪಡೆದ ಟೆರೇಷಿಯನ್ ಕಾಲೇಜು ದ್ವಿತೀಯ, ತಿ.ನರಸೀಪುರದ ವಿದ್ಯೋದಯ ಪ್ರಥಮ ದರ್ಜೆ ಕಾಲೇಜು 36 ಅಂಕಗಳೊಂದಿಗೆ ತೃತೀಯ ಸಮಗ್ರ ಪ್ರಶಸ್ತಿ ಲಭಿಸಿದೆ.

ನಿನ್ನೆ ನಡೆದ ಸಮಾರೋಪ ಸಮಾರಂಭದಲ್ಲಿ ಯುವರಾಜ ಕಾಲೇಜಿನ ಪ್ರಾಂಶುಪಾಲ ಡಾ.ರುದ್ರಯ್ಯ ವಿಜೇತರಿಗೆ ಬಹುಮಾನ ವಿತರಿಸಿದರು.  ಬಳಿಕ  ಮಾತನಾಡಿದ ಅವರು ಕ್ರೀಡೆ  ದೈಹಿಕ ಮತ್ತು ಮಾನಸಿಕ ಆರೋಗ್ಯದಲ್ಲಿ ಸಮತೋಲನ ಸಾಧಿಸಲು   ಸಹಕಾರಿಯಾಗಿರುವುದಲ್ಲದೇ, ವಿದ್ಯಾರ್ಥಿಗಳ ವೃತ್ತಿ ಜೀವನಕ್ಕೂ ರಹದಾರಿ ಎಂದರು.

ಈ ಸಂದರ್ಭ ಕ್ರೀಡಾತಜ್ಞ ಪ್ರೊ.ಶೇಷಣ್ಣ, ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಪಿ.ಕೃಷ್ಣಯ್ಯ ಮತ್ತಿತರರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: