ಮೈಸೂರು

ಮಾವುತರ ಮಕ್ಕಳ ಓದಿಗೆ ಅನುಕೂಲವಾಗುವಂತೆ  ಟೆಂಟ್‌ ಗ್ರಂಥಾಲಯ ಆರಂಭ

ಮೈಸೂರು, ಸೆ.27:- ಪ್ರತಿ ಬಾರಿಯಂತೆ ಈ ಬಾರಿಯೂ ದಸರಾ ಮಹೋತ್ಸವಕ್ಕೆ ಆನೆಗಳೊಂದಿಗೆ ಮೈಸೂರಿಗೆ ಆಗಮಿಸಿರುವ ಮಾವುತರ ಮಕ್ಕಳ ಓದಿಗೆ ಅನುಕೂಲವಾಗುವಂತೆ  ಟೆಂಟ್‌ ಗ್ರಂಥಾಲಯ ಆರಂಭಿಸಲಾಗಿದೆ.

ಮಾವುತರು, ಅವರ ಕುಟುಂಬ ಮೈಸೂರು ಅರಮನೆ ಆವರಣದಲ್ಲಿ ಬೀಡು ಬಿಟ್ಟಿದ್ದು, ಅವರ ಮಕ್ಕಳ  ಜ್ಞಾನಾರ್ಜನೆಗಾಗಿ ಸಾರ್ವಜನಿಕ ಗ್ರಂಥಾಲಯ ಇಲಾಖೆ, ಮೈಸೂರು ನಗರ ಕೇಂದ್ರ ಗ್ರಂಥಾಲಯವು ಟೆಂಟ್‌ ಗ್ರಂಥಾಲಯವನ್ನು ತಾತ್ಕಾಲಿಕವಾಗಿ ನಿರ್ಮಿಸಿದೆ. ಮಾವುತರು ಹಾಗೂ ಅವರ ಕುಟುಂಬದವರಿಗೆ ಮಾತ್ರವಲ್ಲದೆ ಹೆಚ್ಚಾಗಿ ಅವರ ಮಕ್ಕಳಿಗೆ ಪುಸ್ತಕ ಪ್ರಪಂಚ ಪರಿಚಯ ಮಾಡಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ.

ಟೆಂಟ್‌ ಗ್ರಂಥಾಲಯದಲ್ಲಿ ಮಕ್ಕಳ ಕಥೆಗಳು, ಸ್ವಾತಂತ್ರ್ಯ ಹೋರಾಟಗಾರರು, ಗೌತಮ ಬುದ್ಧ, ಗಾಂಧೀಜಿ ಇತರೆ ಮಹನೀಯರ ಪುಸ್ತಕಗಳಿವೆ. ಇದರ ಜೊತೆಗೆ  ದಿನಪತ್ರಿಕೆ ಹಾಗೂ ಮಕ್ಕಳ ನಿಯತಕಾಲಿಕೆಗಳನ್ನು ಒದಗಿಸಲಾಗುತ್ತಿದೆ. 200 ಪುಸ್ತಕಗಳನ್ನು ಮಕ್ಕಳಿಗೆ ಪರಿಚಯಿಸುವುದರ ಜತೆಗೆ ಮಕ್ಕಳಲ್ಲಿ ಓದುವ ಹವ್ಯಾಸವನ್ನು ಬೆಳೆಸುವುದು, ಬಳಕೆ, ಸಂಗ್ರಹಣೆ, ಪುಸ್ತಕಗಳನ್ನು ಗುರುತಿಸುವುದು, ಮುಂತಾದ ಹಲವಾರು ವಿಷಯಗಳಲ್ಲಿಮಾಹಿತಿ ನೀಡುವ ಚುಟುವಟಿಕೆ ಗ್ರಂಥಾಲಯದಲ್ಲಿ ನಡೆಯಲಿದೆ. ಇಲಾಖಾ ಸಿಬ್ಬಂದಿಗಳು, ಹಾಗೂ ಇತರರು ಈ ಸಂಬಂಧ ಪ್ರತಿನಿತ್ಯ ಟೆಂಟ್‌ ಗ್ರಂಥಾಲಯದಲ್ಲಿ ಮಕ್ಕಳಿಗೆ ವಿಭಿನ್ನ ಚಟುವಟಿಕೆಗಳನ್ನು ಪರಿಚಯಿಸುತ್ತಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: