ಮೈಸೂರು

ಮಹಿಷ ದಸರಾ : ಚಿಂತಕ ಪ್ರೊ.ಭಗವಾನ್ ಗೆ ಮನೆಯಿಂದ ಹೊರಬರದಂತೆ ಪೊಲೀಸರ ಮನವಿ

ಮೈಸೂರು,ಸೆ.27:- ಒಂದೆಡೆ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಸಿದ್ಧತೆ ನಡೆಸುತ್ತಿದ್ದರೆ ಇನ್ನೊಂದೆಡೆ ಮಹಿಷ ದಸರಾ ಆಚರಣೆಗೆ ಪ್ರಗತಿಪರ ಸಂಘಟನೆಗಳು ಮುಂದಾಗಿದ್ದು ಇದಕ್ಕೆ ವಿರೋಧ ವ್ಯಕ್ತವಾಗಿದೆ.

ಮಹಿಷಾ ದಸರಾ ಆಚರಣೆಗೆ ಇಂದು ಮೈಸೂರು ಚಾಮುಂಡಿ ಬೆಟ್ಟದ ಮಹಿಷಾಸುರನ ಪ್ರತಿಮೆ ಬಳಿ ಹಾಕಲಾಗಿದ್ದ ವೇದಿಕೆಯನ್ನು ಸಂಸದ ಪ್ರತಾಪ್ ಸಿಂಹ ತೆರವುಗೊಳಿಸಿದ್ದಾರೆ. ಅಲ್ಲದೆ ಮಹಿಷ ದಸರಾ ಆಚರಣೆಗೆ ಮುಂದಾದ ಹಿನ್ನೆಲೆಯಲ್ಲಿ ನಗರದ ಚಾಮುಂಡಿಬೆಟ್ಟ ಟೌನ್ ಹಾಲ್ ಮುಂಭಾಗದ ರಸ್ತೆ ಸುತ್ತಮುತ್ತಲಿನ ಪ್ರದೇಶದಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದೆ.

ಈ ನಡುವೆ ಮಹಿಷ ದಸರಾ ಕುರಿತು ಧ್ವನಿ ಎತ್ತಿದ್ದ ಪ್ರಗತಿ ಪರ ಚಿಂತಕ ಕೆ ಎಸ್ ಭಗವಾನ್  ಮನೆಮುಂದೆ  ಪೊಲೀಸ್ ಭದ್ರತೆಯೊದಗಿಸಿದ್ದು, ಬ್ಯಾರಿಕೇಡ್ ಹಾಕಲಾಗಿದೆ.  ಕುವೆಂಪುನಗರ ಉದಯರವಿ ರಸ್ತೆಯಲ್ಲಿರುವ ಭಗವಾನ್ ನಿವಾಸದಲ್ಲಿ ಪೊಲೀಸ್ ಭದ್ರತೆ ನಿಯೋಜಿಸಲಾಗಿದೆ.

ಹಾಗೆಯೇ ಮನೆಯಿಂದ ಹೊರ ಬರದಂತೆ ಕೆ ಎಸ್ ಭಗವಾನ್ ಗೆ  ಪೊಲೀಸರು ಮನವಿ ಮಾಡಿದ್ದಾರೆ ಎನ್ನಲಾಗಿದೆ.  ಮನೆಯಿಂದ ಹೊರ ಬರದಂತೆ ಕೆ.ಎಸ್ ಭಗವಾನ್ ಗೆ ಪೊಲೀಸರು  ದಿಗ್ಬಂಧನ ವಿಧಿಸಿದ್ದು, ವಿಷಯ ತಿಳಿದ ಪ್ರೊ.ಮಹೇಶ್ ಚಂದ್ರಗುರು ಭಗವಾನ್ ಮನೆಯತ್ತ ತೆರಳಿದ್ದಾರೆ. (ಕೆ.ಎಸ್,ಎಸ್.ಎಚ್)

 

Leave a Reply

comments

Related Articles

error: