ಮೈಸೂರು

ಬಂಡೀಪುರದಲ್ಲಿ ಆರದ ಬೆಂಕಿ : ಕಾರ್ಯಾಚರಣೆಯಲ್ಲಿ ತೊಡಗಿದವರಿಗೆ ಬೇಕಿದೆ ದಾನಿಗಳ ಸಹಾಯ ಹಸ್ತ

ಬಂಡೀಪುರ ರಾಷ್ಟ್ರೀಯ ಉದ್ಯಾನದ ವಿವಿಧೆಡೆ ಬೆಂಕಿ ಇನ್ನೂ ಬೂದಿ ಮುಚ್ಚಿದ ಕೆಂಡದಲ್ಲಿರುವಂತೆ ಒಳಗೊಳಗೆ ಪಸರಿಸುತ್ತಲೇ ಇದೆ. ಬೆಂಕಿ ಬಿದ್ದು ಸರಿಸುಮಾರು ಒಂದು ವಾರವಾದರೂ ಇನ್ನೂ ಆರುವ ಲಕ್ಷಣಗಳು ಗೋಚರಿಸುತ್ತಿಲ್ಲ. ಬೆಂಕಿಯನ್ನು ಆರಿಸಲು ಹಲವರು ತಮ್ಮ ಪ್ರಾಣವನ್ನೂ ಲೆಕ್ಕಿಸದೇ ಅರಣ್ಯ ರಕ್ಷಣೆಗೆ ಮುಂದಾಗಿದ್ದು, ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅವರಿಗೆ ಊಟ, ತಿಂಡಿಗಳು ಸಕಾಲದಲ್ಲಿ ಸಿಗುತ್ತಿಲ್ಲದ ಕಾರಣ ಅರಣ್ಯ ಇಲಾಖೆಗೆ ದಿಕ್ಕು ತೋಚದಾಗಿದ್ದು, ಸಹಾಯ ಹಸ್ತ ಚಾಚಿದೆ.

ಅರಣ್ಯದಲ್ಲಿ ಹೊತ್ತಿ ಉರಿಯುತ್ತಿರುವ  ಬೆಂಕಿ ನಂದಿಸುವುದೊಂದೇ ಅರಣ್ಯ ಇಲಾಖೆಯ ಪ್ರಮುಖ ಗುರಿಯಾಗಿದ್ದು, ಕಾರ್ಯಾಚರಣೆಯಲ್ಲಿ ತೊಡಗಿರುವವರಿಗೆ
ಬ್ರೆಡ್, ಬನ್ನು, ಬಿಸ್ಕೆಟ್, ಕುಡಿಯುವ ನೀರು, ಹಣ್ಣು ಸೇರಿದಂತೆ ಇನ್ನಿತರ ತಿನಿಸುಗಳನ್ನು ದಾನಿಗಳು ನೀಡಬಹುದಾಗಿದೆ.  ದಾನಿಗಳು ತಾವು ಏನಾದರೂ ನೀಡ ಬಯಸಿದಲ್ಲಿ ಮೈಸೂರಿನ ಶ್ರೀ ಚಾಮರಾಜೇಂದ್ರ ಮೃಗಾಲಯಕ್ಕೆ ಹೋಗಿ ತಿನಿಸುಗಳನ್ನು ನೀಡಬಹುದಾಗಿದೆ. ಪ್ರತಿದಿನ ಒಂದು ವಾಹನವು ಸಂಗ್ರಹವಾದ ತಿನಿಸನ್ನು ಬಂಡಿಪುರಕ್ಕೆ ಕೊಂಡೊಯ್ಯಲಿದೆ. ಶುಕ್ರವಾರ(ಇಂದು) ಮಧ್ಯಾಹ್ನ 4ಗಂಟೆಗೆ  ಮೊದಲ ವಾಹನ ಹೊರಡಲಿದೆ. ಮೃಗಾಲಯದ ವತಿಯಿಂದ ಬಾಳೆಹಣ್ಣು, ಕಲ್ಲಂಗಡಿ ಹಣ್ಣು ಸೇರಿದಂತೆ ಇನ್ನಿತರ ತಿನಿಸನ್ನು ಕೊಂಡೊಯ್ಯಲಾಗುತ್ತಿದೆ ಎಂದು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕಿ ಕೆ.ಕಮಲ ಕರಿಕಾಳನ್ ತಿಳಿಸಿದ್ದಾರೆ.
ಈ ನಡುವೆ ಪರಿಸರ ಪ್ರೇಮಿಗಳ ಗುಂಪೊಂದು ನೆರವು ನೀಡಿ ಕಾಡು ಉಳಿಸೋಣ ಅಭಿಯಾನ ನಡೆಸುತ್ತಿದ್ದು, ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮಧ್ಯಮ ವರ್ಗದವರು  500, ಸಾವಿರ ರೂ.ಗಳನ್ನು ಬನ್ನು, ಬ್ರೆಡ್ , ಬಿಸ್ಕೆಟ್ ಗೆ ನೀಡುವ ಮೂಲಕ ಸಹಾಯ ಹಸ್ತ ನೀಡಿ ಉದಾರತೆ ಮೆರೆದಿದ್ದಾರೆ.

Leave a Reply

comments

Related Articles

error: