ಮೈಸೂರು

ದಸರಾ ಮಹೋತ್ಸವ ಅಂಗವಾಗಿ ಸೆ.29ರಿಂದ ಅ.7ರವರಗೆ ರಂಗಾಯಣದ ಭೂಮಿಗೀತದಲ್ಲಿ ನವರಾತ್ರಿ ರಂಗೋತ್ಸವ

ಮೈಸೂರು,ಸೆ.27:- ಮೈಸೂರು ದಸರಾ ಮಹೋತ್ಸವ ಅಂಗವಾಗಿ ಸೆ.29ರಿಂದ ಅ.7ರವರಗೆ ರಂಗಾಯಣದ ಭೂಮಿಗೀತದಲ್ಲಿ ನವರಾತ್ರಿ ರಂಗೋತ್ಸವ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಭೂಮಿಗೀತದಲ್ಲಿ ಸೆ.29ರಂದು ಸಂಜೆ 6ಗಂಟೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ  ಸಚಿವ ಸಿ.ಟಿ.ರವಿ ಉದ್ಘಾಟನೆ ನೆರವೇರಿಸಲಿದ್ದಾರೆ ಎಂದು ರಂಗಾಯಣದ ಜಂಟಿ ನಿರ್ದೇಶಕ ವಿ.ಎನ್. ಮಲ್ಲಿಕಾರ್ಜುನ ತಿಳಿಸಿದರು.

ರಂಗಾಯಣದಲ್ಲಿ ನಡೆದ ಸುದ್ದಿಗೋಷ್ಠಿ ನಡೆಸಿ, ಪೋಸ್ಟರ್ ಬಿಡುಗಡೆಗೊಳಿಸಿ ಮಾತನಾಡಿದ ಅವರು ಅಧ್ಯಕ್ಷತೆಯನ್ನು ಸರ್ಕಾರದ ಕಾರ್ಯದರ್ಶಿ ಆರ್.ಆರ್.ಜನ್ನು ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದ ನಿರ್ದೇಶಕಿ ಕೆ.ಎಂ.ಜಾನಕಿ, ಹಿರಿಯ ರಂಗಕರ್ಮಿ ಪ್ರೊ.ಹೆಚ್.ಎಸ್.ಉಮೇಶ್ ಭಾಗವಹಿಸಲಿದ್ದಾರೆ. ಸೆ.29ರಿಂದ ಪ್ರತಿದಿನ ಸಂಜೆ 6.30ಕ್ಕೆ ಭೂಮಿಗೀತದಲ್ಲಿ ನಾಟಕ ಪ್ರದರ್ಶನಗೊಳ್ಳಲಿದೆ. ಸೆ.29ರಂದು ಶೂದ್ರ ತಪಸ್ವಿ, 30ರಂದು ಹೈದರ್, ಅ.1ರಂದು ವಿದಿಶಾ ಪ್ರಹಸನ, ಅ.2ರಂದು ಕಂಚುಗನ್ನಡಿ, ಅ.3ರಂದು ಮಧುವನದಲ್ಲಿ ನಾಲ್ವಡಿ, ಅ.4ರಂದು ಯುದ್ಧ ಮುಗಿಯುವುದಾದರೆ?, ಅ.5ರಂದು ಬಕಾವಲಿಯ ಹೂ, ಅ.6ರಂದು ಆರ್ಕೇಡಿಯಾದಲ್ಲಿ ಪಕ್, ಅ.7ರಂದು ದಿ ಹೌಸ್ ಆಫ್ ಬರ್ನಾಡಾ ಅಲ್ಬಾ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ತಿಳಿಸಿದರು.

ಸೆ.29ರಂದು ರಂಗ ನೇಪಥ್ಯ ಹೆಚ್.ವಿ.ವೆಂಕಟಸುಬ್ಬಯ್ಯ ಬೆಂಗಳೂರು, ಸೆ.30ರಂದು ರಂಗಸಂಗೀತ ಎಂ.ಎಸ್.ವೆಂಕಟರಾಮ್ ಕುಟ್ಯಾ ಟಿ.ನರಸೀಪರ, ಅ.1ರಂದು ಪ್ರಸಾದನ ಪುರುಷೋತ್ತಮ ತಲವಾಟ, ಸಾಗರ ಶಿವಮೊಗ್ಗ ಜಿಲ್ಲೆ, ಅ.2ರಂದು ಹಿರಿಯ ರಂಗ ನಟ ಬಸಯ್ಯ ಸ್ವಾಮಿ ಹೆಬ್ಬಾಳ ಮಠ ಹಿರೇಕುಂಬಿ, ಸವದತ್ತಿ ತಾಲೂಕು ಬೆಳಗಾವಿ ಜಿಲ್ಲೆ, ಅ.3ರಂದು ತತ್ವಪದ ಗಾಯಕ ಹುಸೇನ್ ಸಾಬ್ ಹ.ಶರೀಫ್ ನವರ್ ಶಿಶುವಿನಹಾಳ, ಶಿಗ್ಗಾಂವ್ ತಾ.ಹಾಬೇರಿ ಜಿಲ್ಲೆ, ಅ.4ರಂದು ಹಿರಿಯ ರಂಗಕರ್ಮಿ ಚಂಡೆ ನಾಗರಾಜ್ ಹೆಗ್ಗೋಡು ಸಾಗರ, ಅ.5ರಂದು ಸಮಾಜ ಸೇವೆ ನೀಲಮ್ಮ ಮೈಸೂರು, ಅ.6ರಂದು ಸಮಾಜ ಸೇವೆ ನಾಗವೇಣಿ ಶಂಕರ್ ಕೋಲಾರ, ಅ.7ರಂದು ಕರಕುಶಲ-ಕಿನ್ನಾಳ ಕಲೆ ಏಕಪ್ಪ ಆರ್.ಚಿತ್ರಗಾರ ಕೊಪ್ಪಳ ಇವರನ್ನು ಸನ್ಮಾನಿಸಲಾಗುವುದು ಎಂದು ತಿಳಿಸಿದರು.

ಈ ಸಂದರ್ಭ ರಂಗಕರ್ಮಿ ಚಿದಂಬರರಾವ್ ಜಂಬೆ, ರಂಗೋತ್ಸವದ ಸಂಚಾಲಕ ಎಸ್.ರಾಮನಾಥ್, ಪ್ರಕಾಶ್ ಗರುಡ ಮತ್ತಿತರರು ಉಪಸ್ಥಿತರಿದ್ದರು. (ಜಿ.ಕೆ, ಎಸ್.ಎಚ್)

 

Leave a Reply

comments

Related Articles

error: