ಕರ್ನಾಟಕಪ್ರಮುಖ ಸುದ್ದಿ

ಆಧಾರ್ ಕಾರ್ಡ್‍ ತೋರಿಸುವ ಹಿರಿಯ ನಾಗರಿಕರಿಗೆ ರಾಜ್ಯ ಸಾರಿಗೆ ಬಸ್‍ಗಳಲ್ಲಿ ಶೇ.25 ರಷ್ಟು ರಿಯಾಯಿತಿ

ಬೆಂಗಳೂರು : ಹಿರಿಯ ನಾಗರಿಕರ ಗುರುತಿನ ಚೀಟಿ ಇಲ್ಲದವರು ತಮ್ಮ ವಯಸ್ಸು ಧೃಢೀಕರಿಸುವ ಸರ್ಕಾರದ ಯಾವುದೇ ದಾಖಲೆ ನೀಡಿ ಪ್ರಯಾಣ ದರದಲ್ಲಿ ಶೇ.25ರಷ್ಟು ರಿಯಾಯಿತಿ ಪಡೆಯಬಹುದು ಎಂದು ಕೆಎಸ್‍ಆರ್‍ಟಿಸಿ ತಿಳಿಸಿದೆ.

60 ವರ್ಷ ಮೇಲ್ಪಟ್ಟವರು ಕೆಎಸ್‍ಆರ್‍ಟಿಸಿ ಬಸ್‍ಗಳಲ್ಲಿ ಪ್ರಯಾಣಿಸುವಾಗ ಹಿರಿಯ ನಾಗರಿಕರ ಗುರುತಿನ ಚೀಟಿ ಮಾಡಿಸಿಕೊಂಡು ತೋರಿಸಬೇಕಿತ್ತು. ಒಂದು ವೇಳೆ ಗುರುತಿನ ಚೀಟಿ ಮರೆತು ಬಂದಾಗ ರಿಯಾಯಿತಿಯಿಂದ ವಂಚಿತರಾಗುತ್ತಿದ್ದರು. ಈ ಹಿನ್ನೆಲೆಯಲ್ಲಿ ವಯಸ್ಸು ಧೃಢೀಕರಿಸುವ ಯಾವುದೇ ಅಧಿಕೃತ ದಾಖಲೆಯನ್ನು ತೋರಿಸಿ ರಿಯಾಯಿತಿ ಪಡೆಯಬಹುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ಆಧಾರ್‍ ಕಾರ್ಡ್‍, ಮತದಾರರ ಗುರುತಿನ ಕಾರ್ಡ್, ಪಾಸ್‍ಪೋರ್ಟ್‍, ಡ್ರೈವಿಂಗ ಲೈಸನ್ಸ್, ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಗುರುತಿನ ಚೀಟಿ, ವಾಸಸ್ಥಳ ಹಾಗೂ ಹುಟ್ಟಿದ ದಿನಾಂಕ ನಮೂದಾಗಿರುವ ಸಾರ್ವನಿಕ ವಲಯದ ಘಟಕಗಳು ನೀಡುವ ಗುರುತಿನ ಚೀಟಿ, ಅಂಗವಿಕಲರ ಮತ್ತು ಹಿರಿಯ ನಾಗರಿಕರ ಕಲ್ಯಾಣ ನಿರ್ದೇಶನಾಲಯ ವಿತರಿಸುವ ಭಾವಚಿತ್ರವಿರುವ ಗುರುತಿನ ಚೀಟಿ ತೋರಿಸಿ ಈ ರಿಯಾಯಿತಿ ಪಡೆಯಬಹುದಾಗಿದೆ.

Leave a Reply

comments

Related Articles

error: