ದೇಶ

ಚೀತಾ ಹೆಲಿಕಾಪ್ಟರ್ ಪತನ: ಇಬ್ಬರು ಪೈಲಟ್ ಮೃತ

ಭೂತಾನ್,ಸೆ.27- ಭಾರತೀಯ ಸೇನೆಗೆ ಸೇರಿದ ಚೀತಾ ಹೆಲಿಕಾಪ್ಟರ್ ಪತನಗೊಂಡಿದ್ದು, ಇಬ್ಬರು ಪೈಲಟ್ ಸಾವನ್ನಪ್ಪಿದ್ದಾರೆ.

ಭೂತಾನೀಸ್ ಆರ್ಮಿ ಪೈಲಟ್ ಕ್ಯಾಂಪ್ ಗೆ ಸೇರಿದ ಚೀತಾ ಹೆಲಿಕಾಪ್ಟರ್, ಭೂತಾನ್ ನಲ್ಲಿ ಅಪಘಾತಕ್ಕೀಡಾಗಿದೆ. ಅಪಘಾತದಲ್ಲಿ ಇಂಡಿಯನ್ ಮಿಲಿಟರಿ ಟ್ರೈನಿಂಗ್ ಟೀಮ್ (IMTRAT)ನ ಇಬ್ಬರು ಪೈಲಟ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಪೂರ್ವ ಭೂತಾನ್ ನಲ್ಲಿ ಈ ಅಪಘಾತವಾಗಿದ್ದು, ಮೃತ ಪೈಲಟ್ ಗಳು ಲೆಫ್ಟಿನೆಂಟ್ ಕರ್ನಲ್ ಸ್ಥಾನಮಾನದ ಅಧಿಕಾರಿಗಳು ಎಂದು ತಿಳಿದುಬಂದಿದೆ.

ಇತ್ತೀಚೆಗಷ್ಟೇ ಗ್ವಾಲಿಯರ್ ನಲ್ಲಿ ಭಾರತೀಯ ವಾಯು ಸೇನೆಯ ಮಿಗ್ 21 ತರಬೇತಿ ಯುದ್ಧ ವಿಮಾನ ಪತನವಾಗಿತ್ತು. ಇಂದಿನ ಅಪಘಾತವೂ ಸೇರಿದಂತೆ ಈ ವರ್ಷ ದೇಶದ ವಿವಿಧ ಮೂಲಗಳಲ್ಲಿ ಸಂಭವಿಸಿದ ವಿಮಾನ ದುರಂತಗಳ ಸಂಖ್ಯೆ 14ಕ್ಕೆ ಏರಿಕೆಯಾದಂತಾಗಿದೆ. (ಎಂ.ಎನ್)

 

Leave a Reply

comments

Related Articles

error: