ದೇಶಪ್ರಮುಖ ಸುದ್ದಿ

ಜೂನ್ 18ಕ್ಕೆ ಯುಪಿಎಸ್‍ಸಿ ಪ್ರಿಲಿಮಿನರಿ ಪರೀಕ್ಷೆ

ನವದೆಹಲಿ: ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‍ಸಿ) ನಡೆಸುವ 2017ನೇ ಸಾಲಿನ ಪ್ರಿಲಿಮಿನರಿ ಪರೀಕ್ಷೆಯ ದಿನಾಂಕ ಹಿಂದೂಡಿಕೆ ಮಾಡಲಾಗಿದ್ದು, ಈ ಬಾರಿ ಜೂನ್ 18ರಂದು ಪರೀಕ್ಷೆಗಳು ನಡೆಯಲಿವೆ.

ಪ್ರತಿವರ್ಷ ಆಗಸ್ಟ್‍ನಲ್ಲಿ ಪರೀಕ್ಷೆ ನಡೆಸಲಾಗುತ್ತಿತ್ತು. ಮೂರು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಜೂನ್ ತಿಂಗಳಲ್ಲಿ 2017ನೇ ಸಾಲಿನ ಪರೀಕ್ಷೆ ನಡೆಸಲು ಅಧಿಸೂಚನೆ ಹೊರಡಿಸಲಾಗಿದೆ.

ಪರೀಕ್ಷೆಯ ಸಮಗ್ರ ಪ್ರಕ್ರಿಯೆಯನ್ನು ಸಕಾಲದಲ್ಲಿ ಪೂರ್ಣಗೊಳಿಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಯುಪಿಎಸ್ ಸಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಒಟ್ಟು 20 ವಿಭಾಗಗಳ 980 ಹುದ್ದೆಗಳಿಗೆ ಪರೀಕ್ಷೆ ನಡೆಯಲಿದೆ. ಅರ್ಜಿ ಸಲ್ಲಿಸಲು ಮಾರ್ಚ್ 17 ಕೊನೆ ದಿನ.

Leave a Reply

comments

Related Articles

error: