ಮೈಸೂರು

ಕೆ ಆರ್ ಕ್ಷೇತ್ರದ ವಾರ್ಡ್ ನಂಬರ್ 62 ರಲ್ಲಿ ಮನೆ ಮನೆ ದಸರಾಗೆ ಹೆಚ್ಚಿದ ಸ್ಪಂದನೆ

ಮೈಸೂರು,ಸೆ.27:-ಮೈಸೂರು ಮಹಾನಗರ ಪಾಲಿಕೆ ವತಿಯಿಂದ ಮನೆ ಮನೆ ದಸರಾ ಹಮ್ಮಿಕೊಳ್ಳಲಾಗಿದ್ದು, ಕೆ ಆರ್ ಕ್ಷೇತ್ರದ ವಾರ್ಡ್ ನಂಬರ್ 62 ರಲ್ಲಿ ಮನೆ ಮನೆ ದಸರಾಗೆ ಹೆಚ್ಚಿದ ಸ್ಪಂದನೆ ದೊರಕಿದೆ.

ವಿವಿಧ ಆಟೋಟ ಸ್ಪರ್ಧೆಗಳಲ್ಲಿ ಭಾಗವಹಿಸಿದ ಮಕ್ಕಳು,ಯುವಕ- ಯುವತಿಯರು ಹಾಗೂ ಮಹಿಳೆಯರು ವಿದ್ಯಾರಣ್ಯಪುರಂನ ಪೊಲೀಸ್ ಠಾಣೆ ಹಿಂಭಾಗವಿರುವ ಮೈದಾನದಲ್ಲಿ ಕಳೆದೆರೆಡು ದಿನಗಳಿಂದ  ಆಟೋಟ ಸ್ಪರ್ಧೆ ನಡೆಯುತ್ತಿದ್ದು, ರಂಗೋಲಿ ಸ್ಪರ್ಧೆ, ಚಿತ್ರಕಲೆ ,ರಸಪ್ರಶ್ನೆ, ಲೆಮನ್ ಅಂಡ್ ಸ್ಪೂನ್ ಹಿಡಿದು ಓಟದ ಸ್ಪರ್ದೆ ಸೇರಿದಂತೆ ಇತರೆ ಆಟಗಳನ್ನು ಆಯೋಜಿಸಲಾಗಿದೆ. ಪಾಲಿಕೆಯ ವಲಯ ಕಛೇರಿ 2ರ ಅಧಿಕಾರಿಗಳಿಂದ ಆಟೋಟ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ಕಂದಾಯ ಪರಿಶೀಲಕರಾದ ಜಯಶ್ರೀ ಮತ್ತು ಧರಣೇಂದ್ರ ನೇತೃತ್ವದಲ್ಲಿ ಕಾರ್ಯಕ್ರಮಗಳು ನಡೆಯುತ್ತಿವೆ. ಆಟೋಟ ಸ್ಪರ್ಧೆಗಳಲ್ಲಿ ಜೆಪಿನಗರದ ಸುತ್ತಮುತ್ತಲಿನ ಜನರು ಭಾಗವಹಿಸಿ ಬಹುಮಾನ ಗೆದ್ದಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: