ಮನರಂಜನೆ

ದಾಖಲೆ ಮೊತ್ತಕ್ಕೆ `ರಾಬರ್ಟ್’ ಆಡಿಯೋ ರೈಟ್ಸ್ ಸೇಲ್

ಬೆಂಗಳೂರು,ಸೆ.28-ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ `ರಾಬರ್ಟ್’ ಸಿನಿಮಾದ ಆಡಿಯೋ ರೈಟ್ಸ್ ದಾಖಲೆ ಮೊತ್ತಕ್ಕೆ ಸೇಲ್ ಆಗಿದೆ.

ರಾಬರ್ಟ್ ಸಿನಿಮಾ ಚಿತ್ರೀಕರಣದ ಹಂತದಲ್ಲಿರುವಾಗಲೇ ಆಡಿಯೋ ರೈಟ್ಸ್ ದಾಖಲೆ ಮೊತ್ತಕ್ಕೆ ಆನಂದ್ ಆಡಿಯೋ ಕಂಪೆನಿ ಖರೀದಿಸಿದೆ. ಆದರೆ ಎಷ್ಟು ಮೊತ್ತಕ್ಕೆ ಆಡಿಯೋ ರೈಟ್ಸ್ ಸೇಲ್ ಆಗಿದೆ ಎಂಬುದರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

ಚಿತ್ರದ ಆಡಿಯೋ ರೈಟ್ಸ್ ಗಾಗಿ ಕಂಪೆನಿಗಳ ಪೈಪೋಟಿ ಜೋರಾಗಿತ್ತು. ಆದರೆ ಕೊನೆಯದಾಗಿ ಚಿತ್ರದ ಆಡಿಯೋ ಆನಂದ್ ಆಡಿಯೋ ಪಾಲಾಗಿದೆ.

ಚಿತ್ರದ ಚಿತ್ರೀಕರಣ ಈಗಾಗಲೇ ಶೇ. 50 ರಷ್ಟು ಮುಗಿದಿದೆ. ಸದ್ಯಕ್ಕೆ ಚಿತ್ರೀಕರಣಕ್ಕೆ ಕೊಂಚ ಬ್ರೇಕ್ ನೀಡಲಾಗಿದ್ದು, ದರ್ಶನ್ ಕ್ಯಾಮೆರಾ ಹಿಡಿದು ಕೀನ್ಯಾದ ಅರಣ್ಯದಲ್ಲಿ ವೈಲ್ಡ್ ಲೈಫ್ ಫೋಟೋಗ್ರಫಿಯಲ್ಲಿ ಎಂಜಾಯ್ ಮಾಡುತ್ತಿದ್ದಾರೆ. ಮುಂದಿನ ಭಾಗದ ಚಿತ್ರೀಕರಣ ಅ. 2 ರಿಂದ ಪ್ರಾರಂಭವಾಗಲಿದೆ.

ತರುಣ್ ಸುಧೀರ್ ಸಾರಥ್ಯದಲ್ಲಿ ಮೂಡಿಬರುತ್ತಿರುವ ಸಿನಿಮಾದಲ್ಲಿ ದರ್ಶನ್ ಗೆ ಜೋಡಿಯಾಗಿ ಬಾಲಿವುಡ್ ನಲ್ಲಿ ಮಿಂಚಿದ್ದ ಕನ್ನಡದ ಬೆಡಗಿ ಆಶಾ ಭಟ್ ನಟಿಸಿದ್ದಾರೆ. ಜಗಪತಿ ಬಾಬು, ವಿನೋದ್ ಪ್ರಭಾಕರ್ ಸೇರಿದಂತೆ ಅನೇಕರು ಸಿನಿಮಾದಲ್ಲಿದ್ದಾರೆ. ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಚಿತ್ರಕ್ಕಿದ್ದು, ಉಮಾಪತಿ ಸಿನಿಮಾಕ್ಕೆ ಬಂಡವಾಳ ಹಾಕಿದ್ದಾರೆ. (ಎಂ.ಎನ್)

Leave a Reply

comments

Related Articles

error: