ಕರ್ನಾಟಕಪ್ರಮುಖ ಸುದ್ದಿಮೈಸೂರು

ವಿತ್ತಂಡವಾದದ ಪೂರ್ವಾಗ್ರಹ ಪೀಡಿತರೊಂದಿಗೆ ಚರ್ಚೆ ಅನವಶ‍್ಯ : ಸಿ.ಟಿ.ರವಿ

ಡಿಸ್ನಿಲ್ಯಾಂಡ್ ಇಲಾಖೆಯ ಪ್ರಸ್ತಾವನೆಯಲ್ಲ : ಸ್ಪಷ್ಟನೆ

ಮೈಸೂರು,ಸೆ.28 : ವಿತ್ತಂಡವಾದಿಗಳೊಂದಿಗೆ, ಪೂರ್ವಾಗ್ರಹ ಪೀಡಿತರೊಂದಿಗೆ, ವಿಚಾರದಲ್ಲಿ ದುರುದ್ದೇಶದ ವಿಕೃತ ಮನಸ್ಥಿತಿಯುಳ್ಳವರೊಂದಿಗೆ ಚರ್ಚೆ ನಡೆಸುವುದು ಅನವಶ್ಯಕ, ದೇಶದ ಸಂಸ್ಕೃತಿ ಪರಂಪರೆಯನ್ನು ಅವಹೇಳನ ಮಾಡುವುದೇ ಬದುಕಾಗಿಸಿಕೊಂಡಿರುವ ಅವರ ಮಾನಸಿಕ ಸ್ಥಿತಿ ಹೇಗಿದೆ ಎಂದು ಉಚಿತ ಪರೀಕ್ಷೆ ಮಾಡಿಸುವ ಮೂಲಕ ಕುಟುಂಬಕ್ಕೆ ಸರ್ಕಾರ ನೆರವಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಪ್ರಗತಿಪರರ ವಿರುದ್ಧ ಲೇವಡಿ ಮಾಡಿದರು.

ಇಂದು ಜಿಲ್ಲಾ ಪತ್ರಕರ್ತರ ಭವನದಲ್ಲಿ ಆಯೋಜಿಸಿದ್ದ ಪತ್ರಕರ್ತರೊಂದಿಗೆ ನಡೆದ ಸಂವಾದದಲ್ಲಿ ಭಾಗಿಯಾಗಿ ಮಾತನಾಡಿ, ಮಹಿಷ ದಸರಾ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ,  ರಾಕ್ಷಸಿ ಮನೋಭಾವ ಹುಟ್ಟು ಹಾಕುವ ಮಹಿಷಾ ದಸರಾ ಆಚರಣೆಗೆ ಅವಕಾಶ ನೀಡಿದ್ದೆ ತಪ್ಪಾಗಿದೆ,  ಇತಿಹಾಸ ತಿರುಚುವುದೇ ಕೆಲವರು ಕೆಲಸವಾಗಿಸಿಕೊಂಡು ಬದುಕು ಕಟ್ಟಿಕೊಟ್ಟಿಕೊಳ್ಳುತ್ತಿದ್ದಾರೆ ಅಂತವರ ವಿರುದ್ಧ ಜಾಗೃತರಾಗಬೇಕು ಎಂದು ಕಿಡಿಕಾರಿದರು.

ಹಿಂದಿಯಿಂದ ಪ್ರಾದೇಶಿಕ ಶಾಲೆಗಳು ಮುಚ್ಚಿಲ್ಲ :  ಹಿಂದಿಯಿಂದ ಯಾವುದೇ ಪ್ರಾದೇಶಿಕ ಶಾಲೆಗಳು ಮುಚ್ಚಿಲ್ಲ, ಹಿಂದಿ ವಿರೋಧಿಸುವುದೇ ಭಾಷಾಭಿಮಾನ ಎಂದುಕೊಂಡಿರುವ ಹೋರಾಟಗಾರರು, ಯಾವ ಕಾರಣದಿಂದ ಪ್ರಾದೇಶಿಕ ಶಾಲೆಗಳು ಬಾಗಿಲು ಹಾಕಿತ್ತಿವೆ ಎಂದು ಅರಿತ್ತಿದ್ದರು ಆ ಬಗ್ಗೆ ಯಾಕೆ ಧ್ವನಿ ಎತ್ತುತ್ತಿಲ್ಲ ? , ಕನ್ನಡ ಶಾಲೆಗಳು ಮುಚ್ಚಲು ಹಿಂದಿ ಕಾರಣವೆಂದು ನಿರೂಪಿಸಲಿ, ಕೇರಳ, ತಮಿಳು ನಾಡು ಸೇರಿದಂತೆ ಪ್ರಾದೇಶಿಕ ಭಾಷೆಗಳ ಶಾಲೆಗಳು ಮುಚ್ಚಲು ಆಂಗ್ಲ ಬಾಷೆ ಕಾರಣವಾಗಿದ್ದು ಈ ಬಗ್ಗೆ ಕನ್ನಡ ಹೋರಾಟಗಾರರು ಮೌನವಾಗಿರುವುದೇಕೆ ಎಂದು ಪ್ರಶ್ನಿಸಿದರು.

ಡಿಸ್ನಿಲ್ಯಾಂಡ್ ಪ್ರಸ್ತಾವನೆ ಇಲ್ಲ : ಕೆ.ಆರ್.ಎಸ್. ನಲ್ಲಿ ಡಿಸ್ನಿಲ್ಯಾಂಡ್ ನಿರ್ಮಾಣ ಇಲಾಖೆಯ ಪ್ರಸ್ತಾವನೆಯಲ್ಲ,  ಯೋಜನೆಗೆ ನಿರ್ಮಾಣಕ್ಕೆ ವಿರೋಧವಿಲ್ಲ. ಆದರೆ, 1500ಕೋಟಿ ಖರ್ಚು ಮಾಡುವಷ್ಟು ನಮ್ಮ ಇಲಾಖೆ ಸದೃಡವಿಲ್ಲ, ಪ್ರವಾಸೋದ್ಯಮ ಇಲಾಖೆಯನ್ನು ನೂತನವಾಗಿ ವಹಿಸಿಕೊಂಡಿದ್ದು, ಇಲಾಖೆ ಹಾಗೂ ಪ್ರವಾಸಿತಾಣಗಳ ಬಗ್ಗೆ ಅಧ್ಯಯನ ನಡೆಸುತ್ತಿರುವೆ, ಇನ್ನೂ ಹಲವು ತಿಂಗಳಲ್ಲಿ ರಾಜ್ಯದ ಪ್ರತಿಯೊಂದು ತಾಣಗಳ ಅಭಿವೃದ್ಧಿಗೆ  ಕಾರ್ಯಕ್ರಮ ರೂಪಿಸುವ ಮೂಲಕ ಇಲಾಖೆಯನ್ನು ಸಮರ್ಥವಾಗಿ ಕಟ್ಟವೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.

ಪಕ್ಷ ಬೆಳೆಸಿ : ಮಂಡ್ಯ ಭಾಗದಲ್ಲಿ ಒಂದು ಸ್ಥಾನ ಪಡೆದಿಲ್ಲ, ಯಾರಿಗೆ ಸಚಿವ ಸ್ಥಾನ ನೀಡುವುದು? ಆದರೆ ಮಂಡ್ಯ ಮೂಲದವರೇ ಮುಖ್ಯಮಂತ್ರಿಯಾಗಿದ್ದಾರೆ ಎಂದು ಸಮರ್ಥಿಸಿಕೊಂಡು, ಮೈಸೂರು ಭಾಗದಲ್ಲಿ ಇನ್ನೂ ಹೆಚ್ಚು ಶಾಸಕರಿಗೆ ಅವಕಾಶ ನೀಡುವ ಮೂಲಕ ಬಿಜೆಪಿ ಬ್ಯಾಂಕ್ ಅಕೌಂಟ್ ಅನ್ನು ಮತ್ತಷ್ಟು ಸದೃಡವಾಗಿಸಬೇಕಿತ್ತು ಎಂದು  ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ಸಂಘದ ಅಧ್ಯಕ್ಷರಾದ ಸಿ.ಕೆ.ಮಹೇಂದ್ರ ಹಾಗೂ ಪ್ರಧಾನ ಕಾರ್ಯದರ್ಶಿ ಕೆ.ಜೆ.ಲೋಕೇಶ್ ಬಾಬು ಹಾಜರಿದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: