ಮೈಸೂರು

ಭಗತ್ ಸಿಂಗ್ ಜನ್ಮದಿನಾಚರಣೆ : ಭಗತ್ ಸಿಂಗ್ ಕನಸಿನ ಭಾರತ ನಿರ್ಮಾಣವಾಗಲಿ : ಡಾ.ಮಂಜುನಾಥ್ ಬಿ.ಹೆಚ್

ಮೈಸೂರು,ಸೆ.28:- ಭಗತ್ ಸಿಂಗ್ ಜನ್ಮದಿನಾಚರಣೆ ಪ್ರಯುಕ್ತ ಇಂಕ್ವಿಲಾಬ್ ಜಿಂದಾಬಾದ್ ಎಂಬ ಕಾರ್ಯ ಕ್ರಮವನ್ನು ಯುವ ಭಾರತ್ ಸಂಘಟನೆ ಮತ್ತು ಭಗತ್ ಸಿಂಗ್ ಯುವಕರ ಬಳಗದ ವತಿಯಿಂದ ಇಂದು ಷೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಲ್ಲಿ ಹಮ್ಮಿಕೊಳ್ಳಲಾಗಿತ್ತು.

ನಗರದ ಯುವಭಾರತ್ ಸಂಘಟನೆ ಮತ್ತು ಭಗತ್ ಸಿಂಗ್ ಯುವ ಬಳಗದ  ವತಿಯಿಂದ ಮೆಟ್ರೋಪೊಲ್  ವೃತ್ತದಲ್ಲಿ ಕ್ರಾಂತಿ ಕಾರಿ ಭಗತ್ ಸಿಂಗ್ ರವರ 112 ನೇ ಜನ್ಮ ದಿನಾಚರಣೆ ಯನ್ನು ಅವರ ಭಾವಚಿತ್ರ ಕ್ಕೆ ಪುಷ್ಪಾರ್ಚನೆ ಮಾಡಿ ಸಾರ್ವಜನಿಕರಿಗೆ ಸಿಹಿ ವಿತರಿಸುವ ಮೂಲಕ ವಿಜೃಂಭಣೆಯಿಂದ ಆಚರಿಸಲಾಯಿತು.

ಬಿಜೆಪಿ ನಗರಾಧ್ಯಕ್ಷ  ಡಾ.ಬಿ.ಎಚ್.ಮಂಜುನಾಥ್  ಮಾತನಾಡಿ ಇಂದಿನ ಯುವ ಪೀಳಿಗೆ ಕ್ರಾಂತಿ ಕಿಡಿಯಾದ ಭಗತ್ ಸಿಂಗ್ ಅವರ ಮಾರ್ಗದರ್ಶನದಂತೆ ನಡೆಯಬೇಕು. ಅವರ ದೇಶಪ್ರೇಮ ನಮಗೆ ಮಾದರಿ,ಇಂತಹ ಮಹಾನ್ ದೇಶಪ್ರೇಮಿಗಳು ಹುಟ್ಟುವುದೇ ಭಾರತಾಂಬೆಯ ಮಡಿಲಲ್ಲಿ ಇಂತಹ ಮಹಾನ್ ಪುರುಷರ ಆಸೆಯಂತೆ ನಮ್ಮೆಲ್ಲರಿಗೂ ಇಂದು ಸ್ವಾತಂತ್ರ್ಯ ಸಿಕ್ಕಿದೆ.  ಸ್ವಾತಂತ್ರ್ಯ ಪೂರ್ವದಲ್ಲಿ ದೇಶದ ಉಳಿವಿಗಾಗಿ ಶಾಂತಿಯುತವಾಗಿ ಒಂದು ತಂಡ ಇದ್ದರೇ, ಕ್ರಾಂತಿಕಾರಿಯಾಗಿ ಒಂದು ತಂಡ ಬ್ರಿಟಿಷರ ವಿರುದ್ಧ ಹೋರಾಟ ನಡೆಸಿ ಸ್ವಾತಂತ್ರ್ಯ ಪಡೆಯಿತು ಎಂದರು.

ಯುವ ಭಾರತ್ ಸಂಘಟನೆಯ ಸಂಚಾಲಕ ಜೋಗಿ ಮಂಜು ಮಾತನಾಡಿ ಬ್ರಿಟಿಷ್ ಸರ್ಕಾರ ವನ್ನು ಕಿತ್ತೊಗಯಲು ಶಾಂತಿಯುತವಾಗಿ ಮಹಾತ್ಮ ಗಾಂಧಿ ಯವರು ಹೋರಾಟ ಮಾಡುತ್ತಿದ್ದರೆ ಅಷ್ಟೇ ಪ್ರಮಾಣದಲ್ಲಿ ಕ್ರಾಂತಿ ಕಾರಿಯಾಗಿ ಭಗತ್‌‌ ಸಿಂಗ್‌‌, ಸುಖದೇವ್, ರಾಜ ಗುರು ಹೋರಾಡಿದರು.  ಚಿಕ್ಕ ವಯಸ್ಸಿನಲ್ಲಿಯೆ ದೇಶದ ಬಗ್ಗೆ ಹೋರಾಡಿದ ವೀರ ಪುರುಷರು,   ಇಂದಿನ ಯುವ ಪೀಳಿಗೆಗೆ ಇಂತಹ ಮಹಾನ್‌ ವ್ಯಕ್ತಿಗಳ ಜೀವನ ಚರಿತ್ರೆಯನ್ನು ರಾಜ್ಯ ಸರ್ಕಾರ ಪಠ್ಯ ಪುಸ್ತಕದಲ್ಲಿ ಅಳವಡಿಸಬೇಕು ಮತ್ತು ನಗರಪಾಲಿಕೆ ಯ ವ್ಯಾಪ್ತಿಯಲ್ಲಿ ಭಗತ್ ಸಿಂಗ್ ವೃತ್ತ ಎಂದು ನಾಮಕರಣ ಮಾಡಬೇಕೆಂದು  ಒತ್ತಾಯಿಸಿದರು.

ಈ ಸಂದರ್ಭದಲ್ಲಿ  ಭಗತ್ ಸಿಂಗ್ ಯುವಕರ ಬಳಗದ ಅಧ್ಯಕ್ಷ ಪ್ರಮೋದ್ ಗೌಡ ,ಸಮಾಜ ಸೇವಕರಾದ ಚರಣ್ ರಾಜ್ ,ಮಾಜಿ ನಗರ ಪಾಲಿಕೆ ಸದಸ್ಯರಾದ ಎಂಡಿ ಪಾರ್ಥ ಸಾರಥಿ , ಉಪಾಧ್ಯ ರಾದ ಸಂದೇಶ್ ಪವಾರ್ , ಅಮಿತ್ ಗೌಡ ಮಧು ಎನ್ ಪೂಜಾರ್, ಲೋಹಿತ್,ಚಂದ್ರು’ ಶರವಣ, ಹರೀಶ್  ಗೌಡ, ಮೋಹಿತ್ ಗೌಡ, ಸ್ವಾಮಿ, ಉಮೇಶ್ ಕೋಟೆ,ನವೀನ್ ಶೆಟ್ಟಿ , ವಿಷ್ಣು, ಮತ್ತಿತರರು ಭಾಗವಹಿಸಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: